ದೊಡ್ಡತೋಟ:ಅತ್ಯುತ್ತಮ ಗುಣಮಟ್ಟದ ಭೂಮಿಕ ಲೈಮ್ ಮಾರುಕಟ್ಟೆಗೆ ಬಿಡುಗಡೆಗೊಂಡಿದೆ. ದೊಡ್ಡತೋಟದಲ್ಲಿ ನೋಂದಾಯಿತ ಸಂಸ್ಥೆಯಾದ ಭೂಮಿಕ ಸೆಲ್ ಲೈಮ್ ಇಂಡಸ್ಟ್ರೀಸ್ ರವರ ‘ಭೂಮಿಕ ಲೈಮ್’ ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿದೆ.ಮಣ್ಣಿನ ರಸಸಾರ ಮತ್ತು ಫಲವತ್ತತೆ ಸುಧಾರಿಸಲು, ಕೃಷಿಗೆ ಯೋಗ್ಯವಾದ ಚಿಪ್ಪು ಸುಣ್ಣದ ಹುಡಿ(ಕುಮ್ಮಾಯ), ಬೋರ್ಡೋ ಸುಣ್ಣ, ಹೈಡ್ರೇಟೆಡ್ ಲೈಮ್, ಡೋಲಮೈಟ್ ಹಾಗೂ ಕೈಗಾರಿಕ ಸುಣ್ಣ ಲಭ್ಯವಿದ್ದು, ಈಗಾಗಲೇ ಎಲ್ಲಾ ಸಹಕಾರಿ ಸಂಸ್ಥೆ, ಆಗ್ರೋ ಕೇಂದ್ರ ಹಾಗೂ ಮಾರುಕಟ್ಟೆಯಲ್ಲಿ ಉಚಿತ ಸಾಗಾಟದ ವ್ಯವಸ್ಥೆಯೋಂದಿಗೆ ಲಭ್ಯವಿದೆ ಎಂದು ಪಾಲುದಾರರು ತಿಳಿಸಿದ್ದಾರೆ.








































