ಸುಳ್ಯ:ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ಪುತ್ತೂರು ಇದರ ರಜತ ಮಹೋತ್ಸವದ ಅಂಗವಾಗಿ ಸುಳ್ಯ ಕೇರ್ಪಳದ ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ‘ರಜತ ಸಂಭ್ರಮ’ ಕಾರ್ಯಕ್ರಮ ನಡೆಯಿತು.ಬೆಳಿಗ್ಗೆ ಶ್ರೀ ದುರ್ಗಾಪರಮೇಶ್ವರಿ ಕಲಾ ತಂಡ ಸುಳ್ಯ ಇವರಿಂದ

ನೃತ್ಯ-ನಾದ ವೈಭವ ನಡೆಯಿತು.ಬಳಿಕ ಯಕ್ಷಗಾನ ವೈಭವ ಕಿರು ತಾಳ ಮದ್ದಳೆ ಧುರನಿರ್ಣಯ ನಡೆಯಿತು.ಬಳಿಕ ಅಂಬಿಕಾ ಪದವಿ ಪೂರ್ವ ಕಾಲೇಜು ಪುತ್ತೂರು ಇವರಿಂದ ಸಂಗೀತ ಸಂಭ್ರಮ ನಡೆಯಿತು.
ಮಧ್ಯಾಹ್ನದ ಬಳಿಕ ಚೈತನ್ಯ ಕಲಾವಿದರು ಬೈಲೂರು ಇವರು ಪ್ರಸ್ತುತಪಡಿಸಿದ ತುಳು ಹಾಸ್ಯಮಯ ನಾಟಕ ‘ರಾಘು ಮಾಸ್ಟ್ರು’ ನಡೆಯಿತು.

















