ಸುಳ್ಯ:ಸಹಕಾರ ಸಂಸ್ಥೆಗಳು ಜನರ ಮತ್ತು ದೇಶದ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದೆ.ಜಾತಿ ಮತ ಭೇಧ ಇಲ್ಲದೆ ಎಲ್ಲರ ಅಭಿವೃದ್ಧಿಗೆ ಸಹಕಾರ ನೀಡಿದೆ ಎಂದು ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ನ ಅಧ್ಯಕ್ಷ ಡಾ.ಕೆ.ವಿ. ಚಿದಾನಂದ ಹೇಳಿದ್ದಾರೆ.ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ಪುತ್ತೂರು ಇದರ ರಜತ ಮಹೋತ್ಸವದ ಅಂಗವಾಗಿ ಸುಳ್ಯ ಕೇರ್ಪಳದ ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ

ನಡೆದ ‘ರಜತ ಸಂಭ್ರಮ’ -2026 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇರುವಷ್ಟು ಸಹಕಾರ ಸಂಸ್ಥೆಗಳು, ಸಹಕಾರಿಗಳು ಬೇರೆ ಎಲ್ಲಿಯೂ ಇಲ್ಲ. ಇಲ್ಲಿ ಸಹಕಾರ ಸಂಘಗಳು ಯಶಸ್ವಿಯಾಗಿ ಬೆಳೆದು ಜನರ ಆರ್ಥಿಕ ಬೇಡಿಕೆಗಳನ್ನು ಪೂರೈಸಿ ಅವರನ್ನು ಬೆಳೆಸಿದೆ. ಸರಸ್ವತಿ ಸೌಹಾರ್ದ ಸಹಕಾರಿ ಸಂಘ ಇನ್ನಷ್ಟು ಬೆಳೆಯಬೇಕು ಎಂದು ಹಾರೈಸಿದರು. ಮುಖ್ಯ ಅತಿಥಿಯಾಗಿದ್ದ
ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ ದೂರ ದೃಷ್ಠಿಯಿಂದ ಹಿರಿಯರು ಸ್ಥಾಪಿಸಿದ್ದ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ಇಂದು ದೊಡ್ಡ ಆರ್ಥಿಕ ಸಂಸ್ಥೆಯಾಗಿ ಬೆಳೆದು ಜನರ, ಸಮಾಜದ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡುತಿದೆ. ಆರ್ಥಿಕ ಶಕ್ತಿಯಾಗಿ ಬೆಳೆದ ಸರಸ್ವತಿ ಸಹಕಾರಿ ಸಂಘ ಸಮಾಜದ ಅಭಿವೃದ್ಧಿಗೆ ಇನ್ನಷ್ಟು ಕೊಡುಗೆ ನೀಡುವಂತಾಗಲಿ ಎಂದು ಹಾರೈಸಿದರು.ಸಮಾರಂಭದ

ಅಧ್ಯಕ್ಷತೆ ವಹಿಸಿದ್ದ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರು ಹಾಗೂ ದಿ ಕ್ಯಾಂಪ್ಕೋ ಲಿಮಿಟೆಡ್ ಮಂಗಳೂರು ಇದರ ಅಧ್ಯಕ್ಷರಾದ ಎಸ್.ಆರ್. ಸತೀಶ್ಚಂದ್ರ ಮಾತನಾಡಿ’ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದಿಂದ ಎಲ್ಲರನ್ನು ಜೊತೆಯಾಗಿ ಸೇರಿಸಿ ಸಹಕಾರಿ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮಾಡಲು ಸಾಧ್ಯವಾಗಿದೆ.ಸಾಮಾಜಿಕ ಬದ್ಧತೆಯಿಂದ ಕೆಲಸ ಮಾಡಿ ನಾವು ಬೆಳೆಯುವುದರ ಜೊತೆಗೆ ಇತರರನ್ನು ಬೆಳೆಸುವ ಪ್ರಯತ್ನ ಮಾಡಿದ್ದೇವೆ.ಇನ್ನಷ್ಟು ಬೆಳೆಯಲು ಸರಸ್ವತಿ ಸಹಕಾರಿ ಸಂಸ್ಥೆಗೆ ಎಲ್ಲರ ಸಹಕಾರ, ಆಶೀರ್ವಾದ ಬೇಕು ಎಂದು ಹೇಳಿದರು.
ದಿ ಕ್ಯಾಂಪ್ಕೋ ಲಿಮಿಟೆಡ್ನ

ಮಾಜಿ ನಿರ್ದೇಶಕರಾದ ರಾಧಾಕೃಷ್ಣ ಕೋಟೆ, ಮಂಗಳೂರು ಎ.ಜೆ. ಆಸ್ಪತ್ರೆ ಮತ್ತು ರಿಸರ್ಚ್ ಸೆಂಟರ್ನ ಗ್ಯಾಸ್ಟ್ರೋಎಂಟರಾಜಲಿಸ್ಟ್ ಮತ್ತು ಹೆಪಟಾಲಿಜಿಸ್ಟ್ ಕನ್ಸಲ್ಟೆಂಟ್ .ಡಾ. ರಾಘವೇಂದ್ರ ಪ್ರಸಾದ್ ಕೆ.ವಿ., ಸುಳ್ಯ ಭಾಲಾವಲೀಕಾರ್ ರಾಜಾಪುರ ಸಾರಸ್ವತ ಸಮಾಜದ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ಪುತ್ತೂರು ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕರಾದ ಎನ್.ಜಯಪ್ರಕಾಶ್ ರೈ, ಉದ್ಯಮಿ ಹಾಗು ಪ್ರಗತಿಪರ ಕೃಷಿಕರಾದ ಗೋಪಾಲಕೃಷ್ಣ ಪೊಸವಳಿಕೆ, ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷೆ ಲತಾ ಮಧುಸೂದನ್,ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷ ಉಮೇಶ ಪ್ರಭು.ಕೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಸಂತ ನಾಯಕ್ ಎ. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ:ವಿವಿಧ ಕ್ಷೇತ್ರದ ಸಾಧಕರಾದ ಕೆ.ವಿ.ಸುರೇಶ್ಚಂದ್ರ ಕಮಿಲ, ಕಸ್ತೂರಿ ಶಂಕರ್, ಡಾ.ಉಮಾಶಂಕರ ಬೋರ್ಕರ್,ಡಾ.ರಘುರಾಮ ಎಂ.ಕೆ, ಅಡ್ಡಂತ್ತಡ್ಕ ದೇರಣ್ಣ ಗೌಡ, ಸುರೇಶ್ಚಂದ್ರ ಭಟ್ ಕಲ್ಮಡ್ಕ, ಅಚ್ಚುತ ನಾಯಕ್ ಕಿಲಂಗೋಡಿ, ಸರಸ್ವತಿ ಕಾಮತ್, ಗೋಪಾಲಕೃಷ್ಣ ಕರೋಡಿ,ವೈಕುಂಠ ಪ್ರಭು, ಕೆ.ಆರ್.ಗೋಪಾಲಕೃಷ್ಣ, ಚಂದ್ರಶೇಖರ ನಾಯಕ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವೈಷ್ಣವಿ ಎಸ್.ನಾಯಕ್ ಪ್ರಾರ್ಥಿಸಿದರು.ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷ ಉಮೇಶ ಪ್ರಭು.ಕೆ, ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು..ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಸುಳ್ಯ ಶಾಖೆಯ ರಾಜೇಶ್.ಬಿ.ಎಸ್ ವಂದಿಸಿದರು. ದೇವಿಪ್ರಸಾದ್ ಎ.ಮತ್ತು ಶಿವಪ್ರಸಾದ್ ಬಿ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮಕ್ಕೆ ಮುನ್ನ ಮತ್ತು ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

2001ರಲ್ಲಿ ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆ 1997ರಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಆರಂಭಗೊಂಡ ರಾಜ್ಯದ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಶ್ರೀ ಸರಸ್ವತಿ ಸಹಕಾರಿಯು 25 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ ರಾಜ್ಯವ್ಯಾಪಿ ಕಾರ್ಯವ್ಯಾಪ್ತಿಯೊಂದಿಗೆ 23 ಶಾಖೆಗಳನ್ನು ಹೊಂದಿ ಸದಸ್ಯರಿಗೆ ಸೇವೆಯನ್ನು ನೀಡುತ್ತಾ ರೂ.900ಕೋಟಿ ಮೀರಿ ವ್ಯವಹಾರವನ್ನು ಮಾಡುತ್ತಿದೆ.ರಜತ ಮಹೋತ್ಸವದ ಸಂಭ್ರಮದಲ್ಲಿ ಸುಳ್ಯ, ಬೆಳ್ಳಾರೆ ಮತ್ತು ಕಡಬ ಶಾಖೆಗಳನ್ನು ಕೇಂದ್ರೀಕರಿಸಿ ‘ಸುಳ್ಯದಲ್ಲಿ ರಜತ ಸಂಭ್ರಮ – 2026’ ಕಾರ್ಯಕ್ರಮವನ್ನು ಆಯೋಜಿಸಿತ್ತು.
















