ಸುಳ್ಯ:ಸಫಲ ಉದ್ಯಮ ಇಲೆಕ್ಟ್ರಾನಿಕ್ಸ್ ವತಿಯಿಂದ ನಡೆಸಲ್ಪಡುತ್ತಿರುವ ಪ್ರಥಮ ಆವೃತ್ತಿಯ ಸುಲಭ ಕಂತು ಯೋಜನೆಯ ಬಂಪರ್ ಬಹುಮಾನದ 10ನೇ ಡ್ರಾ ಆ.15ರಂದು ಸುಳ್ಯದ ಅಂಬೆಟಡ್ಕದ ಸಫಲ ಉಧ್ಯಮ ಇಲೆಕ್ಟ್ರಾನಿಕ್ ಶೋ ರೂಂನಲ್ಲಿ ನಡೆಯಿತು. ಅದೃಷ್ಟ ಡ್ರಾದಲ್ಲಿ
ಕಾರ್ಡ್ ಸಂಖ್ಯೆ S 1303 ಹೊಂದಿರುವ ತಾರಾನಾಥ್ ಆರ್ನೋಜಿ ಒಂದು ಲಕ್ಷ ಮೊತ್ತದ ಗೃಹೋಪಯೋಗಿ ವಸ್ತುಗಳ ವಿಜೇತರಾದರು. ಸುಳ್ಯದ ವೈದ್ಯರಾದ ಡಾ. ಭವಾನಿಶಂಕರ ಅವರು ಅದೃಷ್ಟ ಗ್ರಾಹಕರ ಆಯ್ಕೆಯನ್ನು ನಡೆಸಿಕೊಟ್ಟರು.ಈ ಸಂದರ್ಭದಲ್ಲಿ ಸಂಸ್ಥೆಯ ಪಾಲುದಾರರು, ಸಿಬ್ಬಂದಿಗಳು ಗ್ರಾಹಕರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಆರಂಭಿಸಿರುವ ಎರಡನೇ ಸುಲಭ ಕಂತು ಯೋಜನೆಯ ಎರಡನೇ ಆವೃತ್ತಿಯ ಕಾರ್ಡ್ ಬಿಡುಗಡೆ ಮಾಡಲಾಯಿತು.







































