ಸುಳ್ಯ:ಮಳೆಯ ಕೊರತೆಯಿಂದ ಜಾನುವಾರುಗಳಿಗೆ ಮೇವು ಒದಗಿಸಲು ಸಮಸ್ಯೆ ಎದುರಿಸುತ್ತಿರುವ ರೈತರ ಜಾನುವಾರುಗಳಿಗೆ ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ಉಚಿತವಾಗಿ ಮೇವಿನ ಕಿರು ಪೊಟ್ಟಣಗಳನ್ನು ವಿತರಣೆ ಮಾಡಲಾಗುತಿದೆ. ಬಹು ಕಟಾವಿನ
ಮೇವಿನ ಜೋಳ ಮತ್ತು ಏಕಕಟಾವಿನ ಮೆಕ್ಕೆಜೋಳದ ಬೀಜಗಳು ಉಚಿತವಾಗಿ ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಲ್ಲಿ ಲಭ್ಯವಿದೆ.ತಾಲೂಕಿನ ವಿವಿಧ ಪಶು ವೈದ್ಯಕೀಯ ಸಂಸ್ಥೆಗಳಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯನ್ನು ನೀಗಿಸಲು ಮೇವಿನ ಕಿರು ಪೊಟ್ಟಣಗಳನ್ನು ಉಚಿತವಾಗಿ ರೈತರಿಗೆ ನೀಡಲಾಗುತ್ತಿದೆ.
Hybrid Fodder Sorghum Multicut (5Kg) ಮತ್ತು African Tall Maize (6Kg) ತಳಿಯ ಮೇವಿನ ಬೆಳೆಗಳ ಬೀಜಗಳು ಲಭ್ಯವಿರುತ್ತವೆ.ಮೇವಿನ ಕಿರು ಪೊಟ್ಟಣಗಳನ್ನು ಪಡೆಯಲು ರೈತರು ಜಾನುವಾರುಗಳನ್ನು ಹೊಂದಿರಬೇಕು,ಆಧಾರ್ ಕಾರ್ಡ್, ರೈತರ FRUITS ನೋಂದಣಿ ಸಂಖ್ಯೆ ಮತ್ತು ಆರ್ ಟಿ ಸಿ ಪ್ರತಿ ಒದಗಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಪಶು ವೈದ್ಯಕೀಯ ಸಂಸ್ಥೆ ಅಥವಾ ನಿಮ್ಮ ಗ್ರಾಮದ ಪಶುಸಖಿಯರನ್ನು ಸಂಪರ್ಕಿಸಬಹುದು ಎಂದು
ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ನಿತಿನ್ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









