ಮಂಗಳೂರು:ಜಿಲ್ಲಾ ಕೃಷಿಕ ಸಮಾಜದ ತ್ರೈಮಾಸಿಕ ಸಭೆಯು ಜಿಲ್ಲಾ ಕೃಷಿ ಇಲಾಖೆಯಲ್ಲಿ ನಡೆಯಿತು. ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಿಜಯಕುಮಾರ್ ರೈ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ
ಬೆಳೆ ವಿಮೆ ತಾರತಮ್ಯ, ಮಳೆ ಮಾಪನಗಳ ದುರಸ್ತಿ ಬಗ್ಗೆ ಚರ್ಚೆ ನಡೆಯಿತು. ಎಲ್ಲರಿಗೂ ಸರಿಯಾಗಿ ಬೆಳೆ ವಿಮೆ ದೊರಕಿಸುವಂತೆ ಮಾಡಲು ಕ್ರಮ ಕೈಗೊಳ್ಳುವ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಲಾಯಿತು.ಕೃಷಿ ಇಲಾಖೆ, ರೇಷ್ಮೆ ಇಲಾಖೆ, ಪಶು ಸಂಗೋಪನಾ ಇಲಾಖೆ, ಕೆವಿಕೆಯ ಅಧಿಕಾರಿಗಳು ಇಲಾಖೆಯ ಸೌಲಭ್ಯಗಳ ಮಾಹಿತಿ ನೀಡಿದರು. ತಾಲೂಕು ಕೃಷಿಕ ಸಮಾಜಕ್ಕೆ ನಿವೇಶನ ಒದಗಿಸಲು ಎಸಿ ಹಾಗು ತಹಶೀಲ್ದಾರ್ ಅವರಿಗೆ ಕೃಷಿ ನಿರ್ದೇಶಕರ ಮೂಲಕ ಪತ್ರ ಬರೆಯಲು ನಿರ್ಧರಿಸಲಾಯಿತು.
ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಿಜಯಕುಮಾರ್ ರೈ, ಉಪಾಧ್ಯಕ್ಷ ಪದ್ಮಾಂಬ ರೈ ಬಂಟ್ವಾಳ, ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಕೋಶಾಧಿಕಾರಿ ಕುಸುಮಾಧರ ಎ.ಟಿ, ನಿರ್ದೇಶಕರಾದ ಸಂಜೀವ ಮಠಂದೂರು, ಮಹೇಶ್ ಸವಣೂರು ಮತ್ತಿತರರು ಉಪಸ್ಥಿತರಿದ್ದರು.









