ಮಂಡೆಕೋಲು:ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ 73ನೇ ಸಹಕಾರ ಸಪ್ತಾಹದ ಅಂಗವಾಗಿ ಕೃಷಿ ಮಾಹಿತಿ ಕಾರ್ಯಾಗಾರ ಮತ್ತು ಸಾಂಸ್ಕೃತಿಕ ಸಂಭ್ರಮ ನಡೆಯಿತು.ಕೃಷಿ ಮಾಹಿತಿ ಕಾರ್ಯಾಗಾರದಲ್ಲಿ
ಪ್ರಗತಿಪರ ಕೃಷಿಕರಾದ ಟಿ.ಆರ್. ಸತೀಶ್ಚಂದ್ರ ಕಲ್ಮಡ್ಕ ಮಾಹಿತಿ ನೀಡಿದರು. ಕಾಳು ಮೆಣಸು,ಜಾಯಿ ಕಾಯಿಯ ನಾಟಿ ಮತ್ತು ಪೋಷಣೆ ಕುರಿತು ಮಾಹಿತಿ ನೀಡಿದರು.ಮಂಡೆಕೋಲು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಕಣೆಮರಡ್ಕ ಅಧ್ಯಕ್ಷತೆ ವಹಿಸಿದ್ದರು.
ಸಿಎ ಬ್ಯಾಂಕ್ ಮಾಜಿ ಅಧ್ಯಕ್ಷ ಸುಬೋದ್ ಶೆಟ್ಟಿ ಮೇನಾಲ, ಮಂಡೆಕೋಲು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್. ಜಿ, ಕೃಷಿಕರಾದ ಹಿಮಕರ ಕುಕ್ಕುಡೇಲು, ಪುರುಷೋತ್ತಮ ಕುದ್ಕುಳಿ, ಆನಂದ ಬದಿಕಾನ, ಚಂದ್ರಶೇಖರ ಪೆರಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಹಕಾರ ಸಂಘದ ನಿರ್ದೇಶಕರಾದ ಲಕ್ಷ್ಮಣ ಉಗ್ರಾಣಿಮನೆ ಸ್ವಾಗತಿಸಿ, ತುಳಸಿನಿ ದೇವರಗುಂಡ ವಂದಿಸಿದರು, ಶಿಕ್ಷಕರಾದ ಗಣೇಶ್ ಜಾಲ್ಸೂರು ಕಾರ್ಯಕ್ರಮ ನಿರೂಪಿಸಿದರು. ಬಳಿಕ
ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ನವೋದಯ ಸ್ವಸಹಾಯ ತಂಡದ ಸದಸ್ಯರಿಂದ ಹಾಗೂ ಊರವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಂಜೆ ಶಾರದಾ ಆರ್ಟ್ಸ್ ಕಲಾವಿದೆರ್ ಮಂಜೇಶ್ವರ ಇವರಿಂದ ತುಳು ಸಾಮಾಜಿಕ ಹಾಸ್ಯಮಯ ನಾಟಕ ಎನ್ನ ಫ್ಯಾಮಿಲಿ ನಡೆಯಿತು.














