ಸುಳ್ಯ:ಕೃಷಿಕರಿಗೆ ನೀಡಲಾಗುವ ಶೂನ್ಯ ಬಡ್ಡಿ ದರದ ಬೆಳೆ ಸಾಲದ ಮಿತಿಯನ್ನು 3 ಲಕ್ಷದಿಂದ 5 ಲಕ್ಷಕ್ಕೆ ಏರಿಸಬೇಕು ಎಂದು ಆಗ್ರಹಿಸಿ ಸುಳ್ಯದ ‘ಕೃಷಿಕರ ಹಿತರಕ್ಷಣಾ ವೇದಿಕೆ’ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಹಾಗೂ ಸಹಕಾರ ಸಚಿವರಿಗೆ ಮನವಿ ಸಲ್ಲಿಸಲಾಯಿತು. ನಿಯೋಗದಲ್ಲಿ
ಕೃಷಿಕರ ಹಿತರಕ್ಷಣಾ ವೇದಿಕೆ, ಸುಳ್ಯ ಇದರ ಸಂಚಾಲಕ ಕೃಷ್ಣಪ್ರಸಾದ್ ಮಡ್ತಿಲ, ಸಹ-ಸಂಚಾಲಕರಾದ ಗಣೇಶ್ ಕೊಚ್ಚಿ, ಸಾತ್ವಿಕ್ ಕುದುಂಗು ಹಾಗೂ ಸದಸ್ಯರಾದ ಮುರಳೀಧರ ಕೊಚ್ಚಿ, ಗಣೇಶ್ ಭಜಂತಡ್ಕ ಮಡ್ತಿಲ, ಚಿದಾನಂದ ಬಾಂಜಿಕೋಡಿ, ರಾಮಚಂದ್ರ ಪಲ್ಲತ್ತಡ್ಕ, ಶಿವರಾಮ ನೆಕ್ರಪ್ಪಾಡಿ, ದೇವಿದಾಸ ಕತ್ಲಡ್ಕ, ಜಗದೀಶ್ ಕೋಲ್ಚಾರ್, ನಂದಕುಮಾರ ಬಾರೆತಡ್ಕ, ನವೀನ್ ಸಾರಕೆರೆ, ನಿಖಿಲ್ ಮಡ್ತಿಲ, ಸುದೇಶ್ ಚೆಮ್ನೂರು, ಅಜಿತ್ ದೇರಾಜೆ, ಮೋಹನ್ ಬೋಲ್ಗುಡ್ಡೆ, ಭಾಸ್ಕರ ಕೀಲಾಡಿ, ಅನಿಲ್ ದೇರಾಜೆ, ಭವಾನಿ ಶಂಕರ್ ಪೂಜಾರಿಮನೆ, ಅನಿಂದಿತ್ ಕೆ ಎಸ್, ಕಿಶನ್ ಜಬಳೆ ಸೇರಿದಂತೆ ರೈತ ಬಾಂಧವರು ಉಪಸ್ಥಿತರಿದ್ದರು.










