ಕನಕಮಜಲು: ಕನಕಮಜಲು ಗ್ರಾಮದ ಮೂರ್ಜೆ ಭಾಗದಲ್ಲಿ ಒಂಟಿ ಸಲಗ ದಾಳಿ ಮಾಡಿ ಕೃಷಿ ಹಾನಿ ಮಾಡಿದೆ. ಗುರುವಾರ ಬೆಳಗಿನ ಜಾವ ಕಜೆಗದ್ದೆ ಭಾಗದಿಂದ ಮೂರ್ಜೆ ಭಾಗಕ್ಕೆ ಬಂದ ಕಾಡಾನೆ ವಿವಿಧೆಡೆ ಕೃಷಿಕರ ತೋಟದಲ್ಲಿ ಕೃಷಿ ಹಾನಿ ಮಾಡಿ ರಾಷ್ಟ್ರೀಯ ಹೆದ್ದಾರಿ ದಾಟಿ ಮನೆಯ ಅಂಗಳದ ಮೂಲಕ ದಾಟಿದೆ. ತೆಂಗು, ಅಡಿಕೆ, ಬಾಳೆ ಕೃಷಿಯನ್ನು ವ್ಯಾಪಕವಾಗಿ ನಾಶಪಡಿಸಿದೆ ಎಂದು ಕೃಷಿಕರು ತಿಳಿಸಿದ್ದಾರೆ.









