ಸುಳ್ಯ:ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ(ಸಿಎ ಬ್ಯಾಂಕ್ ಸುಳ್ಯ)ದ ನೇತೃತ್ವದಲ್ಲಿ ಸಂಘದ ಸದಸ್ಯ ಕೃಷಿಕರಿಗೆ ರಿಯಾಯಿತಿ ದರದಲ್ಲಿ 50 ಸಾವಿರ ಕಾಳುಮೆಣಸಿನ ಗಿಡ ಹಾಗೂ 30 ಸಾವಿರ ಕಾಫಿ ಗಿಡ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಚಾಲನೆ ನೀಡಿದರು. ಅಡಿಕೆ ಹಳದಿ ರೋಗ, ಕಾಡು ಪ್ರಾಣಿಗಳ ಹಾವಳಿ ಸೇರಿ
ಹಲವು ಸಮಸ್ಯೆಯಲ್ಲಿ ಸಿಲುಕಿರುವ ಕೃಷಿಕರಿಗೆ ಸುಳ್ಯ ಸಿ.ಎ. ಬ್ಯಾಂಕ್ ಕಾಳು ಮೆಣಸು ಹಾಗೂ ಕಾಫಿ ಗಿಡ ವಿತರಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು.
ಸಿ.ಎ.ಬ್ಯಾಂಕ್ ಅಧ್ಯಕ್ಷ ವಿಕ್ರಂ ಅಡ್ಪಂಗಾಯ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಅಡಿಕೆಗೆ ಎಲೆ ಹಳದಿ ರೋಗ ಬಂದು ಕೃಷಿಕರು ತತ್ತರಿಸಿ ಹೋಗಿದ್ದಾರೆ. ಸಂಘದ ಸದಸ್ಯರಾದ ಕೃಷಿಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 50 ಸಾವಿರ ಕಾಳು ಮೆಣಸು, 30 ಸಾವಿರ ಕಾಫಿ ಗಿಡ ರಿಯಾಯಿತಿ ದರದಲ್ಲಿ ವಿತರಣೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಸಂಘದ ನಿರ್ದೇಶಕರಾದ ಎನ್.ಎ.ರಾಮಚಂದ್ರ, ಬಾಲಗೋಪಾಲ ಸೇರ್ಕಜೆ, ಪ್ರಭೋದ್ ಶೆಟ್ಟಿ ಮೇನಾಲ, ಕೇಶವ ಮಾಸ್ತರ್ ಹೊಸಗದ್ದೆ, ಶಿವರಾಮ ಕೇರ್ಪಳ, ನವ್ಯಾ ಚಂದ್ರಶೇಖರ, ಹರೀಣಾಕ್ಷಿ ಬೇಲ್ಯ, ಚಂದ್ರಶೇಖರ ದೊಡ್ಡೇರಿ,ಮಾಜಿ ಅಧ್ಯಕ್ಷ ಸುಭೋದ್ ಶೆಟ್ಟಿ ಮೇನಾಲ, ಹರೀಶ್ ಕಂಜಿಪಿಲಿ, ರಂಜಿತ್ ಎನ್.ಆರ್., ರಾಜೇಶ್ ಶೆಟ್ಟಿ ಮೇನಾಲ, ಕಮಲಾಕ್ಷ ರೈ ಮೇನಾಲ ಮೊದಲಾದವರು ಉಪಸ್ಥಿತರಿದ್ದರು.










