ಸಂಪಾಜೆ:ಸಂಪಾಜೆ ಯುವ ಕಾಂಗ್ರೆಸ್ ವಿಪತ್ತು ನಿರ್ವಹಣಾ ತಂಡ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಇದರ ಅಂಗವಾಗಿ ಶಾಲಾ ಮಕ್ಕಳಿಗೆ ಕ್ವಿಜ್ ಸ್ಪರ್ಧೆ, ಸನ್ಮಾನ ಮತ್ತು ಸಾರ್ವಜನಿಕ ಸಭೆ ನಡೆಯಿತು.ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ರಕ್ಷಿತ್ ದೊಡ್ಡಡ್ಕ ಸಂಚಾಲಕತ್ವದಲ್ಲಿ, ಇತ್ತೀಚೆಗೆ
ಸುರಿದ ಭಾರೀ ಮಳೆಯಿಂದಾಗಿ ಸಂಪಾಜೆ ಬಳಿಯ ಕಿಂಡಿ ಅಣೆಕಟ್ಟಿನಲ್ಲಿ ಸಂಗ್ರಹವಾಗಿದ್ದ ಬೃಹತ್ ಮರಗಳಿಂದ ಕಿಂಡಿ ಅಣೆಕಟ್ಟು ಅಪಾಯಕಾರಿ ಹಂತ ತಲುಪಿದ್ದಾಗ ಅವುಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಮತ್ತು ಸಮೀಪದ ದೇವಸ್ಥಾನದ ಕಾಂಪೌಂಡ್ ಬಳಿ ಮಳೆ ನೀರು ಸಂಗ್ರಹವಾಗಿ ನಡೆದಾಡಲು ಅಸಾಧ್ಯವಿದ್ದುದನ್ನು ಗಮನಿಸಿ ತುರ್ತು ರಕ್ಷಣಾ ಕಾರ್ಯಾಚರಣೆಗಳಿಗಾಗಿ ಸ್ಪಂದಿಸುವ ಯುವ ಘಟಕವೊಂದನ್ನು ರಚಿಸಿದ್ದರು.ಯುವ ಕಾಂಗ್ರೆಸ್ನ ಈ ಸಂಘಟನೆ ನಡೆಸಿದ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಯುವಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಗೆ
ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಯಿತು. ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಟಿ.ಎಂ ಶಾಹಿದ್ ತೆಕ್ಕಿಲ್, ಕರ್ನಾಟಕ ರಾಜ್ಯ ಅರೆಭಾಷೆ ಸಂಸ್ಕೃತಿ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಭವಾನಿಶಂಕರ ಕಲ್ಮಡ್ಕ, ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ಸುಳ್ಯ ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ ಎಂ ಜೆ, ಸಂಪಾಜೆ ಯುವ ಕಾಂಗ್ರೆಸ್ ರೆಸ್ಕ್ಯೂ ಫೋರ್ಸ್ ಸಂಚಾಲಕ ರಕ್ಷಿತ್ ದೊಡ್ಡಡ್ಕ,ಪ್ರಮುಖರಾದ ಗೋಕುಲದಾಸ್, ಸಿದ್ದೀಕ್ ಕೊಕ್ಕೊ ,ಸಲೀಂ ಪೆರುಂಗೋಡಿ,ಡಾ. ಉಮ್ಮರ್ ಬೀಜದಕಟ್ಟೆ, ಸುಮತಿ ಶಕ್ತಿವೇಲು, ಸುಂದರಿ ಮುಂಡಡ್ಕ, ಎಸ್. ಕೆ. ಹನೀಫ್,ಜಗದೀಶ್ ರೈ, ಅನುಪಮಾ,ಸುಶೀಲ ಕೈಪಡ್ಕ, ವಿಮಲ ಪ್ರಸಾದ್, ವಿಜಯ್ ಕುಮಾರ್, ರಾಮಕೃಷ್ಣ ಐವರ್ನಾಡು, ವಿನೀತ್ ಬಾರ್ಪಣೆ, ಪುಣ್ಯ ಮೂರ್ತಿ,ರಾಜಶೇಖರ್ ಮೇದಿನಡ್ಕ, ಪ್ರೇಮಾ ಹರೀಶ್ವರನ್ ಗಾಂಧಿ, ಶಿವಕುಮಾರ್ ಕಂದಡ್ಕ, ಹನೀಫ್, ಅಬ್ದುಲ್, ಆನಂದ ನಾಗಪಟ್ಟಣ ಹಾಗೂ ಬ್ಲಾಕ್ ನ ವಿವಿಧ ಘಟಕಗಳ ಪದಾಧಿಕಾರಿಗಳು, ಸಂಪಾಜೆ ಯುವ ಕಾಂಗ್ರೆಸ್ ರೆಸ್ಕ್ಯೂ ಟೀಮ್ ನ ಸದಸ್ಯರು ಉಪಸ್ಥಿತರಿದ್ದರು.ಜಿ. ಕೆ. ಹಮೀದ್ ಸ್ವಾಗತಿಸಿ, ಭವಾನಿ ಶಂಕರ ಕಲ್ಮಡ್ಕ, ವಂದಿಸಿದರು. ಎಸ್ ಕೆ ಹನೀಫ್ ಕಾರ್ಯಕ್ರಮ ನಿರೂಪಿಸಿದರು.








































