ತಿರುವನಂತಪುರ: ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿರುವ ವಿರಾಟ್ ಕೊಹ್ಲಿ, ಈ ಮಾದರಿಯಲ್ಲಿ 15,000 ರನ್ ಪೂರೈಸಿದ ಎರಡನೇ ಬ್ಯಾಟರ್ ಎಂಬ ಸಾಧನೆ ಮಾಡಿದ್ದಾರೆ.ಕೊಹ್ಲಿ ಖಾತೆಯಲ್ಲಿ
14,941 ರನ್ ಇದ್ದವು. ಇಂದು 15 ಸಾವಿರ ರನ್ ಗಡಿ ದಾಟಿದರು. ‘ಕಿಂಗ್’ ಕೊಹ್ಲಿ 315 ಪಂದ್ಯಗಳ 303 ಇನಿಂಗ್ಸ್ಗಳಲ್ಲೇ 15 ಸಹಸ್ರ ರನ್ ಗಡಿ ದಾಟಿದ್ದಾರೆ. ಇದರೊಂದಿಗೆ ವೇಗವಾಗಿ ಇಷ್ಟು ರನ್ ಗಳಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ. ‘ಕ್ರಿಕೆಟ್ ದೇವರು’ ಖ್ಯಾತಿಯ ಸಚಿನ್ ತೆಂಡೂಲ್ಕರ್ ಅವರು ಈ ಸಾಧನೆ ಮಾಡಲು 377ನೇ ಇನಿಂಗ್ಸ್ಗಳನ್ನು ತೆಗೆದುಕೊಂಡಿದ್ದರು.








