ಸುಳ್ಯ:ಜೇಸಿಐ ಭಾರತ ವಲಯ 15ರ ತರಬೇತಿ ಸಮ್ಮೇಳನದಲ್ಲಿ ಕೊಡಮಾಡುವ ಪ್ರೇರಣಾ -2026 ಪ್ರಶಸ್ತಿಯು ಜೇಸಿಐ ಭಾರತ ವಲಯ 15ರ ಮಾಜಿ ಅಧ್ಯಕ್ಷ ಅಶೋಕ್ ಚೂಂತಾರಿಗೆ ಲಭಿಸಿದೆ.
ತರಬೇತಿ ಹಾಗೂ
ಸದಸ್ಯರ ಅಭಿವೃದ್ಧಿಯಲ್ಲಿ ಕೊಡುಗೆ ನೀಡಿದ ತರಬೇತುದಾರರನ್ನು ಗುರುತಿಸಿ ಗೌರವಿಸಲಾಗಿದೆ.
ಜೇಸಿಐ ಸುಳ್ಯ ಪಯಸ್ವಿನಿಯ ಪೂರ್ವಾಧ್ಯಕ್ಷ ಅಶೋಕ್ ಚೂಂತಾರಿಗೆ ಇಂದು ಮಂಗಳೂರಿನಲ್ಲಿ ನಡೆದ ವಲಯ 15ರ ತರಬೇತಿ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.ಈ ಸಂದರ್ಭದಲ್ಲಿ
ಜೇಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷೆ ಲತಾಶ್ರೀ ಸುಪ್ರೀತ್ ಮೋಂಟಡ್ಕ, ಶೋಭಾ ಅಶೋಕ್ ಚೂಂತಾರು, ಹಂಸಿಕಾ ಚೂಂತಾರು, ಸುಪ್ರೀತ್ ಮೋಂಟಡ್ಕ, ವಿನೋದ್ ಮೂಡಗದ್ದೆ ಉಪಸ್ಥಿತರಿದ್ದರು.








