ತಿರುವನಂತಪುರಂ:ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹಾಗು ನಾಯಕ ಶುಭ್ಮನ್ ಗಿಲ್ ಸಿಡಿಸಿದ ಅಮೋಘ ಶತಕದ ನೆರವಿನಿಂದ ಪ್ರವಾಸಿ ವೆಸ್ಟ್ಇಂಡೀಸ್ ತಂಡದ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯ ಭಾರತ ಭರ್ಜರಿ ಗೆಲುವು ದಾಖಲಿಸಿದೆ. ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯ ಮೊದಲ ಹಣಾಹಣಿಯು ತಿರುವನಂತಪುರಂನ ಗ್ರೀನ್ಫೀಲ್ಡ್ ಇಂಟರ್ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆಯಿತು.ಮೊದಲು ಬ್ಯಾಟಿಂಗ್ ಮಾಡಿದ
ವಿಂಡೀಸ್ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 295 ರನ್ ಗಳಿಸಿತು.ಗುರಿ ಬೆನ್ನಟ್ಟಿದ ಭಾರತ 41.4 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 300 ರನ್ ಗಳಿಸಿ 8 ವಿಕೆಟ್ಗಳ ಗೆಲುವು ದಾಖಲಿಸಿತು.ಭಾರತದ ಪರ ವಿರಾಟ್ ಕೊಹ್ಲಿ ಕೇವಲ 88 ಎಸೆತಗಳಲ್ಲಿ 10 ಬೌಂಡರಿ ಹಾಗು 9 ಭರ್ಜರಿ ಸಿಕ್ಸರ್ ನೆರವಿನಿಂದ ಅಜೇಯ 139 ರನ್ ಗಳಿಸಿದರು. ಈ ಮೂಲಕ ಕೊಹ್ಲಿ ಏಕದಿನ ಕ್ರಿಕೆಟ್ನಲ್ಲಿ 15 ಸಾವಿರ ರನ್ ಗಳಿಸಿ, ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಮುರಿದರು. ನಾಯಕ ಶುಭ್ಮನ್ ಗಿಲ್
ಕೇವಲ 108 ಎಸೆತಗಳಲ್ಲಿ 13ಬೌಂಡರಿ ಹಾಗು 1 ಸಿಕ್ಸರ್ ನೆರವಿನಿಂದ 110 ರನ್ ಬಾರಿಸಿದರು. ಕೊಹ್ಲಿ ಹಾಗಿಲು ಗಿಲ್ ಎರಡನೇ ವಿಕೆಟ್ಗೆ 151 ರನ್ಗಳ ಜೊತೆಯಾಟ ಆಡಿದರು. ರೋಹಿತ್ ಶರ್ಮ 32 ರನ್ ಬಾರಿಸಿದರು. ಇದಕ್ಕೂ ಮುನ್ನ
ವಿಂಡೀಸ್ ಆರಂಭಿಕರು, ಮೊದಲ ವಿಕೆಟ್ಗೆ 135 ರನ್ ಕಲೆಹಾಕಿದರು. ಜಾನ್ ಕ್ಯಾಂಪ್ಬೆಲ್ (62) ಅರ್ಧ ಶತಕ ಗಳಿಸಿದರೆ, ಜಸ್ಟಿನ್ ಗ್ರೀವ್ಸ್ ಅಮೋಘ ಶತಕ ಸಿಡಿಸದರು. 108 ಎಸೆತಗಳನ್ನು ಎದುರಿಸಿದ ಅವರು 6 ಬೌಂಡರಿ, 3 ಸಿಕ್ಸರ್ ಸಹಿತ 101 ರನ್ ಕಲೆಹಾಕಿದರು. ಇದು ಅವರಿಗೆ ಏಕದಿನ ಮಾದರಿಯಲ್ಲಿ ಚೊಚ್ಚಲ ಶತಕ. ಭಾರತ ಪರ ಕುಲದೀಪ್ ಯಾದವ್ 10 ಓವರ್ಗಳಲ್ಲಿ 40 ರನ್ ನೀಡಿ ನಾಲ್ಕು ವಿಕೆಟ್ ಉರುಳಿಸಿದರು. ಪ್ರಸಿದ್ಧ ಕೃಷ್ಣ ಎರಡು ಮತ್ತು ನಿತೀಶ್ ಕುಮಾರ್ ರೆಡ್ಡಿ ಒಂದು ವಿಕೆಟ್ ಪಡೆದರು.








