ವೆಲ್ಲಿಂಗ್ಟನ್:ನ್ಯೂಜಿಲೆಂಡ್ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿಯ 2ನೇ ಪಂದ್ಯದಲ್ಲಿ ಭಾರತ ತಂಡವು ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ 4 ರನ್ಗಳ ಗೆಲುವು ಸಾಧಿಸಿದೆ.ಮಳೆಪೀಡಿತ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡಕ್ಕೆ ಭಾರತದ ಬೌಲರ್ಗಳು ಕಾಟ ನೀಡಿದರು. ಆರಂಭಿಕ
ಆಟಗಾರ ವಿಲ್ ಯಂಗ್ 6 ರನ್ಗೆ ವಿಕೆಟ್ ಒಪ್ಪಿಸಿದರೆ, ಟಿಮ್ ಸೈಫರ್ಟ್ ಅವರು ಶೂನ್ಯಕ್ಕೆ ಫೆವಿಲಿಯನ್ ಸೇರಿದರು. ಟಾಮ್ ಲ್ಯಾಥಮ್, ಗ್ಲೆನ್ ಫಿಲಿಪ್ಸ್ ಮತ್ತ ನಾಥನ್ ಸ್ಮಿತ್ ಒಂದಂಕಿಗೆ ವಿಕೆಟ್ ಒಪ್ಪಿಸಿದ್ದು ಕಿವೀಸ್ ಕುಸಿತಕ್ಕೆ ಕಾರಣವಾಯಿತು.53 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದ ಕಿವೀಸ್ ಪಡೆಗೆ, ಡ್ಯಾರಿಲ್ ಮಿಚೆಲ್ (55 ರನ್) ಅರ್ಧಶತಕ ಸಿಡಿಸಿ ಆಸರೆಯಾದರು. ನಾಯಕ ಮಿಚೆಲ್ ಸ್ಯಾಂಟ್ನರ್ (33 ರನ್) ಜತೆಗೆ 6ನೇ ವಿಕೆಟ್ಗೆ 59 ರನ್ ಜೊತೆಯಾಟವಾಡುವ ಮೂಲಕ ತಂಡವು
ನೂರರೊಳಗೆ ಕುಸಿಯದಂತೆ ಕಾಪಾಡಿದರು. 41 ಓವರ್ಗಳಲ್ಲಿ 134 ರನ್ಗೆ ಸರ್ಪಪತನ ಕಂಡಿತು. ಭಾರತದ ಪರ ಗುರ್ನೂರ್ ಬ್ರಾರ್ 4 ವಿಕೆಟ್, ಅಕೀಬ್ ನಬಿ, ಅನ್ಶುಲ್ ಕಾಂಬೋಜ್ ಮತ್ತು ಅಕ್ಷರ್ ಪಟೇಲ್ ತಲಾ 2 ವಿಕೆಟ್ ಕಬಳಿಸಿದರು.135 ರನ್ಗಳ ಸುಲಭ ಗುರಿ ಬೆನ್ನತ್ತಿದ ಭಾರತ ತಂಡವು ಕೂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ನಾಯಕ ಶುಭಮನ್ ಗಿಲ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಉತ್ತಮ ಲಯದಲ್ಲಿದ್ದ ವಿರಾಟ್ ಕೊಹ್ಲಿ 7 ರನ್ಗೆ ಔಟ್ ಆದರು.17 ರನ್ಗೆ 2 ವಿಕೆಟ್ ಕಳೆದುಕೊಂಡಿದ್ದ ಭಾರತ ತಂಡಕ್ಕೆ ಅನುಭವಿ ಆಟಗಾರ ರೋಹಿತ್ ಶರ್ಮಾ(23 ರನ್) ಹಾಗೂ ಶ್ರೇಯಸ್ ಅಯ್ಯರ್(30 ರನ್) ಆಸರೆಯಾದರು. ಆದರೆ, ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾದರು. ಅಕ್ಷರ್ ಪಟೇಲ್ 7 ರನ್ ಗಳಿಸಿದ ವೇಳೆ ಮ್ಯಾಥ್ಯೂ ಫಿಶರ್ಗೆ ವಿಕೆಟ್ ಒಪ್ಪಿಸಿದರು. ನಮನ್ ಧೀರ್ 12 ರನ್ ಗಳಿಸಿ ಔಟ್ ಆದರು.ಅನುಭವಿ ಆಟಗಾರ ಕೆ.ಎಲ್.ರಾಹುಲ್ (ಅಜೇಯ 26 ರನ್) ತಾಳ್ಮೆಯ ಆಟವಾಡಿದರು. ಭಾರತ ತಂಡ 26 ಓವರ್ಗಳಲ್ಲಿ
7 ವಿಕೆಟ್ ನಷ್ಟಕ್ಕೆ 113 ರನ್ಗಳಿಸಿದ್ದ ವೇಳೆ ಮಳೆಯಿಂದಾಗಿ ಕೆಲಹೊತ್ತು ಆಟ ನಿಂತ ಕಾರಣ ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ ಭಾರತ ತಂಡವು 4 ರನ್ಗಳ ಗೆಲುವು ಸಾಧಿಸಿದೆ.ನ್ಯೂಜಿಲೆಂಡ್ ಪರ ಜೇಕಬ್ ಡಫಿ, ಕೈಲ್ ಜೆಮೀಸರ್ ತಲಾ 3 ವಿಕೆಟ್ ಕಬಳಿಸಿದರು.ಎರಡನೇ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಭಾರತ ತಂಡವು ಸರಣಿಯಲ್ಲಿ 2–0 ಮುನ್ನಡೆ ಸಾಧಿಸಿದೆ






























