ಆಕ್ಲೆಂಡ್: ಅಭಿಷೇಕ್ ಶರ್ಮ ಸಿಡಿಸಿದ ಅಬ್ಬರದ ಶತಕದ ನೆರವಿನಿಂದ ಮೂರನೇ ಟಿ-20 ಕ್ರಿಕೆಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಭರ್ಜರಿ ಗೆಲುವು ದಾಖಲಿಸಿದೆ. ಕಿವೀಸ್ ನೀಡಿದ್ದ 199 ರನ್ಗಳ ಗುರಿಯನ್ನು ಭಾರತ ತಂಡ ಕೇವಲ
13.2 ಓವರ್ಗಳಲ್ಲಿ ತಲುಪಿ 6 ವಿಕೆಟ್ಗಳ ಜಯ ಸಾಧಿಸಿದೆ.ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್, ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 198 ರನ್ಗಳ ಸವಾಲಿನ ಮೊತ್ತ ಕಲೆಹಾಕಿತ್ತು.ಡೇರಿಲ್ ಮಿಚಲ್ 89, ಫಿನ್ ಅಲೆನ್ 40, ಜೆಕಬ್ಸ್ 39 ರನ್ ಹೊಡೆದು ಗಮನ ಸೆಳೆದರು. ಗುರಿ ಬೆನ್ನತ್ತಿದ ಭಾರತ ಆರಂಭದಿಂದಲೇ ಎದುರಾಳಿ ಬೌಲರ್ಗಳ ಮೇಲೆ ಸವಾರಿ ಮಾಡಿತು.ಮೈದಾನದ ಮೂಲೆ ಮೂಲೆಗೂ ಬೌಂಡರಿ, ಸಿಕ್ಸರ್ಗಳ ಸುರಿಮಳೆಗೈದ ಭಾರತೀಯ ಬ್ಯಾಟರ್ಗಳು, ಪ್ರತಿ ಓವರ್ಗೆ 15ಕ್ಕೂ ಹೆಚ್ಚು ರನ್ ಕಲೆಹಾಕಿದರು.
ಅಭಿಷೇಕ್ ಶರ್ಮಾ 38 ಬಾಲ್ಗಳಿಗೆ 113 ಹಾಗೂ ಸೂರ್ಯವಂಶಿ 19 ಬಾಲ್ಗಳಿಗೆ 40 ರನ್ ಸಿಡಿಸುವ ಮೂಲಕ ಭಾರತವನ್ನು ಗೆಲುವಿನ ದಡ ಸೇರಿಸಿದರು.
ಕೇವಲ 13.2 ಓವರ್ಗಳಲ್ಲಿ (80 ಎಸೆತಗಳಲ್ಲಿ) 4 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿದ ಭಾರತ, ಇನ್ನೂ 40 ಎಸೆತಗಳು ಬಾಕಿ ಇರುವಂತೆಯೇ ವಿಜಯದ ನಗೆ ಬೀರಿತು. ಈ ಮೂಲಕ ಭಾರತ ಸರಣಿ ವಶಪಡಿಸಿಕೊಂಡಿತು.ಅಭಿಷೇಕ್ ಶರ್ಮ 11ಸಿಕ್ಸರ್ ಹಾಗು 9 ಬೌಂಡರಿ ಸಿಡಿಸಿದರೆ, ವೈಭವ್ ಸೂರ್ಯಕಾಂತಿ ತಲಾ ನಾಲ್ಕು ಸಿಕ್ಸರ್ ಹಾಗು ಬೌಂಡರಿ ಸಿಡಿಸಿದರು. ಇವರಿಬ್ಬರು ಮೊದಲ ವಿಕೆಟ್ಗೆ 7.1 ಓವರ್ಗಳಲ್ಲಿ 133 ರನ್ ಚಚ್ಚಿ ಗೆಲುವಿಗೆ ಅಡಿಪಾಯ ಹಾಕಿ ಕೊಟ್ಟರು.









