ಹ್ಯಾಮಿಲ್ಟನ್: ಭಾರತ ವಿರುದ್ಧದ 5 ಪಂದ್ಯಗಳ ಟಿ–20 ಸರಣಿಯ ಕೊನೆಯ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು 7 ವಿಕೆಟ್ಗಳ ಭರ್ಜರಿ ಜಯಗಳಿಸಿದೆ.ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು ನಾಯಕ ಶ್ರೇಯಸ್ ಅಯ್ಯರ್(50 ರನ್: 23 ಎಸೆತ) ಮತ್ತು ಇಶಾನ್ ಕಿಶನ್(61 ರನ್: 32 ಎಸೆತ) ಅರ್ಧಶತಕದ ನೆರವಿನಿಂದ
20 ಓವರ್ಗಳ ಅಂತ್ಯಕ್ಕೆ 8 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತು.192 ರನ್ಗಳ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ತಂಡ ಆರಂಭಿಕ ಆಟಗಾರ ಟಿಮ್ ಸೀಫರ್ಟ್, 50 ಎಸೆತಗಳಲ್ಲಿ 11 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 93 ರನ್ ಗಳಿಸಿದರು.ಡ್ಯಾರಿಲ್ ಮಿಚೆಲ್ (29 ರನ್: 16 ಎಸೆತ), ಗ್ಲೆನ್ ಫಿಲಿಪ್ಸ್ (ಅಜೇಯ 65 ರನ್: 38 ಎಸೆತ) ಭಾರತದ ಬೌಲರ್ಗಳನ್ನು ಕಾಡಿದರು.
ಭಾರತದ ಪರ ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ ಹಾಗೂ ನಿತೀಶ್ ಕುಮಾರ್ ರೆಡ್ಡಿ ತಲಾ 1 ವಿಕೆಟ್ ಪಡೆದರು. ಭುವನೇಶ್ವರ್ ಕುಮಾರ್ ಮತ್ತೆ ದುಬಾರಿಯಾದರು.ನ್ಯೂಜಿಲೆಂಡ್ ಪರ 4 ವಿಕೆಟ್ ಕಬಳಿಸಿದ ಆಡಮ್ ಮಿಲ್ನೆ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಹಾಗೂ ಸರಣಿಯಲ್ಲಿ 276 ರನ್ ಬಾರಿಸಿದ ಗ್ಲೆನ್ ಫಿಲಿಪ್ಸ್, ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಅಂತಿಮ ಪಂದ್ಯದಲ್ಲಿ 7 ವಿಕೆಟ್ ಸೋಲು ಅನುಭವಿಸಿದರು ಕೂಡ, ಭಾರತ ತಂಡವು ಸರಣಿಯನ್ನು 3–2 ಅಂತರದಲ್ಲಿ ವಶಪಡಿಸಿಕೊಂಡಿತು.









