ಸುಳ್ಯ:ರೋಟರಿ ಕ್ಲಬ್ ಸುಳ್ಯ ಮತ್ತು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಇವರ ಜಂಟಿ ಆಶ್ರಯದಲ್ಲಿ ಎಸ್.ದಯಾನಂದ ಆಳ್ವ ಅವರ ಎರಡು ಕೃತಿಗಳ ಬಿಡುಗಡೆ ಸಮಾರಂಭ ರಥಬೀದಿಯ ರೋಟರಿ ಸಭಾಂಗಣದಲ್ಲಿ ನಡೆಯಿತು. ಎಸ್. ದಯಾನಂದ ಆಳ್ವ ಅವರು ರಚಿಸಿದ
ಇಂಗ್ಲಿಷ್ನ ‘ಚಾಕೋಲೇಟ್ ಬಾಕ್ಸ್’ ಮತ್ತು ಕನ್ನಡದ ‘ಜೀವನ – ಅನುಭವ 75’ ಎಂಬ ಎರಡು ಪುಸ್ತಕಗಳನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಹಾಗು ನಿವೃತ್ತ ಪ್ರಾಂಶುಪಾಲ ಡಾ. ಪ್ರಭಾಕರ ಶಿಶಿಲ ಬಿಡುಗಡೆ ಮಾಡಿದರು. ರೋಟರಿ
ಕ್ಲಬ್ ಅಧ್ಯಕ್ಷೆ ಲತಾ ಮಧುಸೂದನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಲಯನ್ಸ್ ಮಾಜಿ ಗವರ್ನರ್ ಎಂ.ಬಿ. ಸದಾಶಿವ, ಕಸಾಪ ಅಧ್ಯಕ್ಷ ಚಂದ್ರಶೇಖರ ಪೇರಾಲು,ರೋಟರಿ ಕಾರ್ಯದರ್ಶಿ ಹರಿರಾಯ ಕಾಮತ್, ಪ್ರೆಸಿಡೆಂಟ್ ಎಲೆಕ್ಟ್ ಸುಧಾಕರ ಕೊಚ್ಚಿ, ಎಜಿ ಆನಂದ ಖಂಡಿಗೆ ಉಪಸ್ಥಿತರಿದ್ದರು. ದಳ ಸುಬ್ರಾಯ ಭಟ್ ಮತ್ತು ಚಂದ್ರಮತಿ ಕಾರ್ಯಕ್ರಮ ನಿರೂಪಿಸಿದರು. ಕೆ.ಆರ್. ಗೋಪಾಲಕೃಷ್ಣ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು
































