ಬೆಂಗಳೂರು:ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಬರುವ ನಿಗಮಗಳು, ಮಂಡಳಿಗಳು ಹಾಗೂ ಅಭಿವೃದ್ಧಿ ಪ್ರಾಧಿಕಾರಗಳ ನಿರ್ದೇಶಕರು ಮತ್ತು ಸದಸ್ಯರ ನೇಮಕ ಮಾಡಿ ಸರಕಾರ ಆದೇಶಿಸಿದೆ. ವಿವಿಧ ನಿಗಮ, ಮಂಡಳಿ ಹಾಗೂ
ಪ್ರಾಧಿಕಾರಿಗಳಿಗೆ ಒಟ್ಟು 428 ಮಂದಿಯನ್ನು ನಿರ್ದೇಶಕರು,ಸದಸ್ಯರಾಗಿ ನೇಮಕ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ 12 ಮಂದಿಗೆ ಅವಕಾಶ ಲಭಿಸಿದೆ.ಮಂಗಳೂರು ವಿದ್ಯುತ್ ಸರಬರಾಜು ನಿಗಮ ನಿಯಮಿತ (ಮೆಸ್ಕಾಂ) ಸದಸ್ಯರಾಗಿ ಉಳ್ಳಾಲದ ಪ್ರಶಾಂತ್ ರಾಜಿ,ಕರ್ನಾಟಕ ಜೀವವೈವಿಧ್ಯ ಮಂಡಳಿಗೆ ಬಂಟ್ವಾಳ ತಾಲ್ಲೂಕು ಕೊಲ್ನಾಡಿನ ಕೆ.ಸುಭಾಶ್ಚಂದ್ರ ಶೆಟ್ಟಿ, ಕರ್ನಾಟಕ ಕರಾವಳಿ ಅಭಿವೃದ್ಧಿ ಮಂಡಳಿಗೆ ವಿಟ್ಲದ ರಾಜಾರಾಮ್ ಅವರನ್ನು ನೇಮಕಗೊಂಡಿದ್ದಾರೆ.ಕರ್ನಾಟಕ
ಮೀನುಗಾರಿಕೆ ಅಭಿವೃದ್ಧಿ ನಿಗಮಕ್ಕೆ ಬೆಳ್ತಂಗಡಿ ಕಳಂಜ ಗ್ರಾಮದ ಪಿ.ಟಿ ಸೆಬಾಸ್ಟಿಯನ್, ಕರ್ನಾಟಕ ಮೆರಿಟೈಮ್ ಮಂಡಳಿಗೆ ಬಾಳ ಮಂಗಳಪೇಟೆಯ ಎಂ.ಎ ಹಸನಬ್ಬ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಗೆ ಜಪ್ಪಿನಮೊಗರು ಗ್ರಾಮದ ಜೆ.ನಾಗೇಂದ್ರ ಕುಮಾರ್, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಮಂಡಳಿಗೆ ಪುತ್ತೂರಿನ ಶ್ರೀಪ್ರಸಾದ್ ಪಾಣಾಜೆ, ರೇಷ್ಮೆ ಮಂಡಳಿಗೆ ಮಂಗಳೂರು ಬಾರೆಬೈಲ್ನ ಶಶಿಕಲಾ, ಸಹಕಾರ ಕುಕ್ಕುಟ ಮಹಾಮಂಡಳಕ್ಕೆ ಬೆಳ್ತಂಗಡಿಯ ಪರಂಕಿ ಗ್ರಾಮದ ಅಬ್ದುಲ್ ರಹಿಮಾನ್ ಪಡುಪು, ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಗೆ ಚಿಲಿಂಬಿಯ ವಿಶ್ವಾಸ್ ದಾಸ್, ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮಕ್ಕೆ ಕಡಬ ನೆಲ್ಯಾಡಿಯ ಸರ್ವೋತ್ತಮ ಗೌಡ, ಮೈಸೂರು ಲ್ಯಾಂಪ್ಸ್ಗೆ ಮಂಗಳೂರು ಬೆಂದೂರಿನ ತೇಜಸ್ವಿ ರಾಜ್ ಜಿ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿದು ಬಂದಿದೆ.
































