ಮೈಸೂರು: ಗ್ರೀನ್ ಹೀರೋ ಆಫ್ ಇಂಡಿಯಾ ಡಾ.ಆರ್.ಕೆ.ನಾಯರ್ ಅವರು ಕರ್ನಾಟಕದಲ್ಲಿ ನಿರ್ಮಿಸುತ್ತಿರುವ ಕರ್ನಾಟಕದ 3ನೇ ಭಾರತ್ ವನ ನಿರ್ಮಾಣಕ್ಕೆ ನ.13ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ.ಮೈಸೂರಿನ ಕೆ.ಸಿ.ಲೇಔಟ್ ಪಾರ್ಕ್ನಲ್ಲಿ ಪ್ರಧಾನಿ ಅವರು ಗಿಡ ನೆಡುವ ಮೂಲಕ ಚಾಲನೆ ನೀಡುವರು. ಜೊತೆಗೆ
ಒಂದು ಸಾವಿರ ವಿದ್ಯಾರ್ಥಿಗಳು ಗಿಡ ನೆಡುವರು. ಮೈಸೂರಿನಲ್ಲಿ ನಿರ್ಮಿಸುವ ಭಾರತ್ ವನದ ಎರಡು ಲಕ್ಷಕ್ಕೂ ಅಧಿಕ ಗಿಡ ನೆಡುವರು.ಸ್ವಲ್ಪ ಗಿಡ ಕೆ.ಸಿ.ಲೇಔಟ್ ಪಾರ್ಕ್ನಲ್ಲಿ ಮತ್ತು ಉಳಿದ ಗಿಡಗಳನ್ನು ವಿಜಯನಗರದ 17 ಲೇಔಟ್ ಪಾರ್ಕ್ನಲ್ಲಿ ಎಂದು ಡಾ.ಆರ್.ಕೆ.ನಾಯರ್ ತಿಳಿಸಿದ್ದಾರೆ.ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಮೈಸೂರು ಮಹಾನಗರ ಪಾಲಿಕೆಯ ಸಹಕಾರದಲ್ಲಿ

ಗಿಡ ನೆಡುವ ಲೇ ಔಟ್
ಮೈಸೂರಿನಲ್ಲಿ ಆರ್.ಕೆ.ನಾಯರ್ ಅವರ ಫಾರೆಸ್ಟ್ ಕ್ರಿಯೇಟರ್ಸ್ ನೇತೃತ್ವದಲ್ಲಿ ಭಾರತ್ ವನ ನಿರ್ಮಾಣ ಮಾಡಲಿದ್ದಾರೆ. ಮಿಯಾವಾಕಿ ಮದರಿಯಲ್ಲಿ ಡಾ. ಆರ್.ಕೆ.ನಾಯರ್ ಅವರು ನಿರ್ಮಿಸುವ ಮೂರನೇ ಭಾರತ್ ವನ ಇದು. ರಾಯಚೂರಿನಲ್ಲಿ 65 ಸಾವಿರ ಗಿಡಗಳ ಮತ್ತು ವಿಜಯನಗರ ಜಿಲ್ಲೆಯ ಕೂಡ್ಲಿಗೆಯ ಚಿಕ್ಕಜೋಗಿ ಹಳ್ಳಿಯಲ್ಲಿ 25 ಸಾವಿರ
ಗಿಡಗಳ ಭಾರತ್ ವನ ನಿರ್ಮಾಣ ಮಾಡಲಾಗಿತ್ತು. ರಾಯಚೂರಿನ ಭಾರತ್ ವನದ ಉದ್ಘಾಟನೆಯನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಉದ್ಘಾಟಿಸಿದ್ದರು.2022ರಲ್ಲಿ ಗುಜರಾತ್ನ ಕಚ್ನ 5.5 ಲಕ್ಷ ಗಿಡಗಳ ಭಾರತ್ ವನ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದರು. ಸುಳ್ಯ ಜಾಲ್ಸೂರಿನವರಾದ ಆರ್.ಕೆ.ನಾಯರ್ ಅವರು ಇದುವರೆಗೆ 12 ರಾಜ್ಯಗಳಲ್ಲಿ 150 ಭಾರತ್ ವನ ನಿರ್ಮಿಸಿದ್ದಾರೆ.45 ಲಕ್ಷ ಗಿಡ ನೆಟ್ಟಿದ್ದಾರೆ.
































