ಆಗ್ಲೆಂಡ್: ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ-20 ಸರಣಿಯ ನಾಲ್ಕನೇ ಪಂದ್ಯದಲ್ಲಿ ಭಾರತ ತಂಡವು 87 ರನ್ಗಳ ಸೋಲನುಭವಿಸಿದೆ. ನ್ಯೂಜಿಲೆಂಡ್ ನೀಡಿದ್ದ 260 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತ ತಂಡವು ಕೇವಲ 172 ರನ್ ಗಳಿಸಲಷ್ಟೇ ಶಕ್ತವಾಯಿತು.
ಬೃಹತ್ ಗುರಿ ಬೆನ್ನಟ್ಟಿದ ಭಾರತ ತಂಡವು
ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಸಂಜು ಸ್ಯಾಮ್ಸನ್ (4 ರನ್), ಅಭಿಷೇಕ್ ಶರ್ಮಾ (27), ಇಶಾನ್ ಕಿಶನ್ ಶೂನ್ಯ ಮತ್ತು ನಾಯಕ ಶ್ರೇಯಸ್ ಅಯ್ಯರ್ (22) ಬೇಗನೇ ಔಟ್ ಆದರು.ನಂತರ ಬಂದ ನಿತೀಶ್ ಕುಮಾರ್ ರೆಡ್ಡಿ (21), ತಿಲಕ್ ವರ್ಮಾ (35) ಮತ್ತು ನಮನ್ ಧೀರ್ (28) ಹೋರಾಟ ನಡೆಸಿದರಾದರೂ ಪಂದ್ಯ ಗೆಲ್ಲಿಸಲು ಇದು ನೆರವಾಗಲಿಲ್ಲ. ಅಂತಿಮವಾಗಿ ಭಾರತ ತಂಡವು 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 172 ರನ್ ಗಳಿಸಷ್ಠೇ ಶಕ್ತವಾಯಿತು.ನ್ಯೂಜಿಲೆಂಡ್ ಪರ ಉತ್ತಮ ಬೌಲಿಂಗ್ ದಾಳಿ ಪ್ರದರ್ಶಿಸಿದ ಜಾಕೋಬ್ ಡಫಿ ನಾಲ್ಕು ವಿಕೆಟ್ ಪಡೆದು ಮಿಂಚಿದರೆ, ಮಿಚೆಲ್ ಸ್ಯಾಂಟ್ನರ್ ಮತ್ತು ಮ್ಯಾಥ್ವೆ ಫಿಶ್ನರ್ ತಲಾ ಎರಡು ವಿಕೆಟ್ ಪಡೆದುಕೊಂಡರು. ಆ್ಯಡಂ ಮಿಲ್ನೆ ಒಂದು ವಿಕೆಟ್ ಪಡೆದುಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ
ನ್ಯೂಜಿಲೆಂಡ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಟಿಮ್ ಸೈಫರ್ಟ್ ಕೇವಲ 3 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರೆ, ನಂತರ ಬಂದ ಡ್ಯಾರಿಲ್ ಮಿಚೆಲ್ ಕೂಡ 24 ರನ್ ಗಳಿಸಿ ಔಟ್ ಆದರು.ನಾಲ್ಕನೇ ವಿಕೆಟ್ಗೆ ಜೊತೆಯಾದ ಫಿನ್ ಅಲೆನ್ (31 ರನ್) ಮತ್ತು ಗ್ಲೆನ್ ಫಿಲಿಪ್ಸ್ 59 ರನ್ಗಳ ಜೊತೆಯಾಟ ಆಡುವ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು. ನಂತರ ಬಂದ ಜಾಕೋಬ್ ಕೂಡ 7 ರನ್ ಗಳಿಸಿ ವಿಕೆಟ್ ಒಪ್ಪಿಸಿ ಹೊರನಡೆದರು.ಈ ಹಂತದಲ್ಲಿ ಜೊತೆಯಾದ ಗ್ಲೆನ್ ಫಿಲಿಪ್ಸ್ (107 ರನ್, 49 ಎಸೆತ, 6 ಬೌಂಡರಿ ಮತ್ತು 10 ಸಿಕ್ಸರ್) ಮತ್ತು ಮೈಕಲ್ ಬ್ರೇಸ್ವೆಲ್ (65 ರನ್, 25 ಎಸೆತ, 4 ಬೌಂಡರಿ ಮತ್ತು 6 ಸಿಕ್ಸರ್) ಮಿಂಚಿದರು. ಈ ಜೋಡಿ ಆರನೇ ವಿಕೆಟ್ಗೆ 115 ರನ್ಗಳ ಜೊತೆಯಾಟ ಆಡುವ ಮೂಲಕ ಭಾರತಕ್ಕೆ 260 ರನ್ಗಳ ಬೃಹತ್ ಗುರಿ ನೀಡುವಲ್ಲಿ ಯಶಸ್ವಿಯಾದರು.









