ಸುಳ್ಯ:ಸುಳ್ಯ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ನಡೆಯಿತು. ಎಓಎಲ್ಇ ಉಪಾಧ್ಯಕ್ಷೆ ಶೋಭಾ ಚಿದಾನಂದ ಧ್ವಜಾರೋಹಣ ನೆರವೇರಿಸಿದರು,ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ ಪೇರಾಲು ದೀಪ ಪ್ರಜ್ವಲನಗೈದರು , ಪದವಿ ವಿಭಾಗದ
ಪ್ರಾಚಾರ್ಯ ಡಾ.ರುದ್ರ ಕುಮಾರ್ ಎಂ ಎಂ.ಮೀಟ್ ಡಿಕ್ಲೆರ್ ಮಾಡಿದರು , ಸಂಸ್ಥೆಯ ಪ್ರಾಚಾರ್ಯರಾದ ಮಿಥಾಲಿ ಪಿ ರೈ,ವಿದ್ಯಾರ್ಥಿ ಕ್ಷೇಮಾಧಿಕಾರಿ ರೇಷ್ಮಾ ಎಂ ಎಂ ವೇದಿಕೆಯಲ್ಲಿ ಉಪಸ್ಥಿತರಿದ್ದರು.ದೈಹಿಕ ಶಿಕ್ಷಣ ನಿರ್ದೇಶಕರಾದ ಕ್ಯಾಪ್ಟನ್ ಸೀತಾರಾಮ ಎಂ ಡಿ, ಮಿಥನ್, ಕಬಡ್ಡಿ ಕೋಚ್ ನಾಗರಾಜ್ ನಾಯ್ಕ್ ಭಟ್ಕಳ ಸಹಕರಿಸಿದರು.ವಿದ್ಯಾರ್ಥಿನಿಯರಾದ ಪ್ರತೀಕ್ಷಾ ಮತ್ತು ಬಳಗದವರು ಪ್ರಾರ್ಥಿಸಿದರು. ಕ್ರೀಡಾ ಕಾರ್ಯದರ್ಶಿ ಶೇಕ್ ಅರ್ಮನ್ ನೂರುದ್ದಿನ್ ಪ್ರತಿಜ್ಞಾ ವಿಧಿ ಬೋಧಿಸಿದರು.ಕನ್ನಡ ಉಪನ್ಯಾಸಕಿ ಬೇಬಿ ವಿದ್ಯಾ ಪಿ.ಬಿ.ಸ್ವಾಗತಿಸಿ,ನಿರೂಪಿಸಿದರು.
































