ಆಕ್ಲೆಂಡ್: ನ್ಯೂಜಿಲೆಂಡ್ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಅನುಭವಿ ಆಟಗಾರ ವಿರಾಟ್ ಕೊಹ್ಲಿ(74 ರನ್:51 ಎಸೆತ) ಅವರ ಸ್ಪೋಟಕ ಅರ್ಧ ಶತಲದ ನೆರವಿನಿಂದ ಭಾರತ ತಂಡವು 5 ವಿಕೆಟ್ಗಳ ಸುಲಭ ಜಯ ಗಳಿಸಿದೆ.ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ
ನ್ಯೂಜಿಲೆಂಡ್ 40.2 ಓವರ್ಗಳಲ್ಲಿ 185 ರನ್ಗೆ ಆಲೌಟ್ ಆಯಿತು.ಕಿವೀಸ್ ತಂಡವನ್ನು ಭಾರತದ ವೇಗದ ಬೌಲರ್ಗಳು ಕಾಡಿದರು.ನ್ಯೂಜಿಲೆಂಡ್ ಪರ ಟಿಮ್ ಸೀಫರ್ಟ್ 38 ರನ್, ಡ್ಯಾರಿಲ್ ಮಿಚೆಲ್ 28 ರನ್, ಗ್ಲೆನ್ ಫಿಲಿಪ್ಸ್ 30 ರನ್ ಮತ್ತು ಕೊನೆಯಲ್ಲಿ ಬ್ಲೇರ್ ಟಿಕ್ನರ್ 34 ರನ್ ಗಳಿಸುವ ಮೂಲಕ ಕೊಂಚ ಹೋರಾಟ ನಡೆಸಿದರು.
ಭಾರತದ ಪರ ಆರ್ಷದೀಪ್ ಸಿಂಗ್ 4 ವಿಕೆಟ್, ಗುರ್ನೂರ್ ಬ್ರಾರ್ 3 ವಿಕೆಟ್ ಹಾಗೂ ಅನ್ಶುಲ್ ಕಾಂಬೋಜ್ 2 ವಿಕೆಟ್ ಪಡೆಯುವ ಮೂಲಕ ನ್ಯೂಜಿಲೆಂಡ್ ತಂಡವನ್ನು ಕಟ್ಟಿಹಾಕಿದರು.186 ರನ್ಗಳ ಸುಲಭ ಗುರಿ
ಬೆನ್ನತ್ತಿದ ಭಾರತ ತಂಡದ ಅನುಭವಿ ಆಟಗಾರ ರೋಹಿತ್ ಶರ್ಮಾ, ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ನಾಯಕ ಶುಭಮನ್ ಗಿಲ್(37 ರನ್: 56 ಎಸೆತ) ಹಾಗೂ ವಿರಾಟ್ ಕೊಹ್ಲಿ(74 ರನ್) ಎರಡನೇ ವಿಕೆಟ್ಗೆ 113 ರನ್ಗಳ ಜೊತೆಯಾಟವಾಡುವ ಮೂಲಕ ತಂಡಕ್ಕೆ ಗೆಲುವು ಖಚಿತಪಡಿಸಿದರು.ಭಾರತ ತಂಡವು 22.4 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 143 ರನ್ ಗುರಿ ಮುಟ್ಟಿತು. ಈ ಮೂಲಕ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತು. ಮಳೆ ಅಡ್ಡಿ ಪಡಿಸಿದ ಕಾರಣ ಭಾರತದ ಗುರಿ 32 ಓವರ್ಗಳಲ್ಲಿ143 ರನ್ ಆಗಿ ನಿರ್ಧರಿಸಿತ್ತು.












