ಸುಳ್ಯ:ರೋಟರಿ ಕ್ಲಬ್ ಸುಳ್ಯ ಮತ್ತು ಕ್ರಿಯೇಟಿವ್ ಸ್ಕೂಲ್ ಆಫ್ ಆರ್ಟ್ಸ್ ಸುಳ್ಯ ಇದರ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಅವಿಭಜಿತ ಸುಳ್ಯ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ ವರ್ಣ ಚಿತ್ತಾರ ಮತ್ತು ಚಿತ್ರ ಜಾತ್ರೆ ನ.15ರಂದು ರಥಬೀದಿಯ ರೋಟರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆಯಲಿದೆ ಎಂದು
ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷೆ ಲತಾ ಮಧುಸೂದನ್ ತಿಳಿಸಿದ್ದಾರೆ.ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 6 ವಿಭಾಗದಲ್ಲಿ ಪ್ರಾಥಮಿಕ ಹಾಗು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸ್ಪರ್ಧೆ ನಡೆಯಲಿದೆ.ಚಿತ್ರ ಸಂತೆ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಚಿತ್ರ ಕಲಾವಿದ ವಿಲಾಸ್ ನಾಯಕ್ ನೇತೃತ್ವದಲ್ಲಿ ಕಲಾವಿದರು ಲೈವ್ ಆಗಿ ಚಿತ್ರ ಬಿಡಿಸಲಿದ್ದಾರೆ. ರಥಬೀದಿಯಲ್ಲಿ ವಿವಿಧ ಸ್ಟಾಲ್ಗಳನ್ನು
ಅಳವಡಿಸಲಾಗುವುದು. ಇಲ್ಲಿ ಚಿತ್ರ ಕಲಾವಿದರ ಕಲಾಕೃತಿಗಳ ರಚನೆ ಮತ್ತು ಪ್ರದರ್ಶನ ನಡೆಯಲಿದೆ ಎಂದರು.ಮೈಸೂರು ಬೃಂದಾವನ ರೋಟರಿ ಕ್ಲಬ್ನ ಹೆಚ್.ಆರ್.ಕೇಶವ ಉದ್ಘಾಟಿಸುವರು. ರೋಟರಿ ಕ್ಲಬ್ ಅಧ್ಯಕ್ಷೆ ಲತಾ ಮಧುಸೂದನ್ ಅಧ್ಯಕ್ಷತೆ ವಹಿಸುವರು.ಸುಮಾರು ಒಂದೂವರೆ ಸಾವಿರ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಧುಸೂದನ್ ಕುಂಭಕ್ಕೋಡು, ಕ್ರಿಯೇಟಿವ್ ಸ್ಕೂಲ್ ಆಫ್ ಆರ್ಟ್ಸ್ನ ಶ್ರೀಹರಿ ಪೈಂದೋಡಿ,ಪ್ರಸನ್ನ ಐವರ್ನಾಡು, ಪ್ರಮುಖರಾದ ಪುರುಷೋತ್ತಮ ಕಿರ್ಲಾಯ, ನಳಿನಿ ಕಿರ್ಲಾಯ, ಅನಂತರಾಜ್ ಮಾಯಿಪನ ಉಪಸ್ಥಿತರಿದ್ದರು.
































