ಲಾಸ್ ಏಂಜಲೀಸ್: ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಶನಿವಾರ ಮುಂಜಾನೆ ನಡೆದ ಪಂದ್ಯದಲ್ಲಿ ಅಮೇರಿಕಾ ತಂಡಕ್ಕೆ ಭರ್ಜರಿ ಜಯ. ಯುಎಸ್ಎ ತಂಡವು ಪರಾಗ್ವೆ ತಂಡವನ್ನು 4-1 ಗೋಲುಗಳ ಅಂತರದಲ್ಲಿ ಸೋಲಿಸಿ ಶುಭಾರಂಭ ಮಾಡಿತು. ಇತರ ಪಂದ್ಯಗಳಲ್ಲಿ
ಏಷ್ಯಾದ ತಂಡ ದಕ್ಷಿಣ ಕೊರಿಯಾ ಚೆಕ್ ರಿಪಬ್ಲಿಕ್ ತಂಡವನ್ನು 2-1 ಅಂತರದಲ್ಲಿ ಸೋಲಿಸಿದರೆ, ಕೆನಡಾ ಮತ್ತು ಬೋಸ್ನಿಯ ಪಂದ್ಯ(1-1) ಡ್ರಾ ಆಯಿತು. ಇಂದು ರಾತ್ರಿ 12.30ಕ್ಕೆ ಕತ್ತರ್ ತಂಡ ಸ್ವಿಜರ್ಲ್ಯಾಂಡ್ ತಂಡವನ್ನು ಹಾಗು ನಾಳೆ ಮುಂಜಾನೆ 3.30ಕ್ಕೆ ಬ್ರೆಝಿಲ್ ಮೊರಕ್ಕೋ ತಂಡವನ್ನು ಎದುರಿಸಲಿದೆ.














