ಪೆರಾಜೆ:ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ಪ್ರಧಾನ ಅರ್ಚಕರಾಗಿ ಅಕ್ಷಯ ಭಟ್ ಬರ್ಲಾಯಬೆಟ್ಟು ನೇಮಕಗೊಂಡಿದ್ದಾರೆ.
ಕುಕ್ಕೆ ಸುಬ್ರಮಣ್ಯ ಸಮೀಪ “ದೇವಿಕೃಪಾ ಬರ್ಲಾಯಬೆಟ್ಟು” ನಿವಾಸಿಯಾದ ಇವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂ. ಬಿ. ಎ. ಹಾಗೂ
ಎಂ.ಕಾಂ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.ಇವರು ತಮ್ಮ ಸಹೋದರರಲ್ಲಿ ಸಂಪೂರ್ಣ ವೇದಾಧ್ಯಯನ ಪೂರೈಸಿ, ಕಳೆದ 6 ವರ್ಷದಿಂದ ಪೌರೋಹಿತ್ಯ ವಿಭಾಗದಲ್ಲಿ ತೊಡಗಿಸಿಕೊಂಡಿದ್ದಾರೆ. ರಾಮ ಭಟ್ ಹಾಗೂ ಮೀನಾಕ್ಷಿ ದಂಪತಿಗಳ ದ್ವಿತೀಯ ಪುತ್ರ.ಪತ್ನಿ ಸಹನಾ ಕೆ. ಎಸ್, ಪುತ್ರ ಅಭಿನವ ರಾಮ ಬಿ. ಎ.














