ಮಂಡೆಕೋಲು:ಬಿಜೆಪಿ ಮಂಡೆಕೋಲು ಶಕ್ತಿ ಕೇಂದ್ರದ ವತಿಯಿಂದ ನಮ್ಮ ಹಕ್ಕಿಗಾಗಿ ನಮ್ಮ ನಡಿಗೆ ಪಾದಯಾತ್ರೆ ಮತ್ತು ಕಾಂಗ್ರೆಸ್ ಸರಕಾರದ ವಿರುದ್ಧ ನಮ್ಮಹಕ್ಕು ನಮಗೆ ನೀಡಿ ಪ್ರತಿಭಟನಾ ಅಭಿಯಾನ ನ.2ರಂದು ಮಂಡೆಕೋಲಿನಲ್ಲಿ ನಡೆಯಿತು.ಮಂಡೆಕೋಲು ಪೇಟೆಯಲ್ಲಿ ಜಮಾಯಿಸಿದ
ಬಿಜೆಪಿ ಕಾರ್ಯಕರ್ತರು ಮೆರವಣಿಗೆ ಮೂಲಕ ಆಗಮಿಸಿ ಪಂಚಾಯತ್ ಮುಂಭಾಗದಲ್ಲಿ ಪ್ರತಿಭಟನಾ ಸಭೆ ನಡೆಸಿದರು. ಸಭೆಯನ್ನು ಉದ್ದೇಶಿಸಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವಾರ್,
ಬಿಜೆಪಿ ಮುಖಂಡ ಶಿವಪ್ರಸಾದ್ ಉಗ್ರಾಣಿಮನೆ ಮಾತನಾಡಿದರು. ಬಿಜೆಪಿ ಪ್ರಮುಖರಾದ
ಸುರೇಶ್ ಕಣೆಮರಡ್ಕ, ಜಯರಾಜ್ ಕುಕ್ಕೆಟಿ, ಬಾಲಚಂದ್ರ ದೇವರಗುಂಡ, ಕೇಶವ ಮೂರ್ತಿ ಹೆಬ್ಬಾರ್,ಅನಿಲ್ ತೋಟಪ್ಪಾಡಿ, ವಿನುತಾ ಪಾತಿಕಲ್ಲು, ಚಂದ್ರಜಿತ್ ಮಾವಂಜಿ, ಪ್ರತಿಮಾ ಹೆಬ್ಬಾರ್, ಲಕ್ಷ್ಮಣ ಉಗ್ರಾಣಿಮನೆ, ಸುಂದರ ಕಾಡು ಸೊರಂಜ, ವಸಂತಿ ಉಗ್ರಾಣಿಮನೆ, ಮಮತಾ ಬೊಳುಗಲ್ಲು, ಮೋಹಿನಿ ಚಂದ್ರಶೇಖರ, ನವೀನ್ ಮುರೂರು,ದಿವ್ಯಾಲತ ಚೌಟಾಜೆ, ಸದಾನಂದ ಮಡಿವಾಳಮೂಲೆ, ವಸಂತ ಮಡಿವಾಳಮೂಲೆ, ಅನಂತ ಕೃಷ್ಣ ಚಾಕೋಟೆ, ಸಂತೋಷ ಚಾಕೋಟೆ, ಬೂತ್ ಸಮಿತಿ ಕಾರ್ಯಕರ್ತರು ಇದ್ದರು. ಸಭೆ ಬಳಿಕ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೂಲಕ ಮನವಿ ಸಲ್ಲಿಸಲಾಯಿತು.










