ಸುಳ್ಯ:ದೀಪಾವಳಿ ಹಬ್ಬದ ಪ್ರಯುಕ್ತ ಸುಳ್ಯದ ಪ್ರತಿಷ್ಠಿತ ಮೊಬೈಲ್ ಮಾರಾಟ ಮಳಿಗೆ ಸುಳ್ಯ ನಗರದ ಮುಖ್ಯ ರಸ್ತೆ ಬಾಳೆಮಕ್ಕಿಯಲ್ಲಿರುವ ‘ಮೊಬೈಲ್ ಗ್ಯಾರೇಜ್’ನಲ್ಲಿ ದೀಪಾವಳಿ ಧಮಾಕಾ ಸೇಲ್- ಸ್ಮಾರ್ಟ್ ಫೋನ್ ಮಾರಾಟ ಹಬ್ಬ ಆರಂಭಗೊಂಡಿದೆ. ಮೊಬೈಲ್ ಖರೀದಿಸುವ ಗ್ರಾಹಕರಿಗೆ ಮತ್ತು ಇತರ ರೂ.150ಕ್ಕಿಂತ ಮೇಲ್ಪಟ್ಟ ಪ್ರತಿ ಖರೀದಿಗೆ
ಉಚಿತ ಲಕ್ಕಿ ಡ್ರಾ ಕೂಪನ್ ನೀಡಲಾಗುತ್ತದೆ. ಡ್ರಾ ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ಘೋಷಿಸಿದೆ. ವಿಜೇತರಿಗೆ ಲಕ್ಕಿ ಬಹುಮಾನವಾಗಿ ಆಕರ್ಷಕ iPhone 15 ನೀಡಲಾಗುವುದು. ದ್ವಿತೀಯ ಬಹುಮಾನವಾಗಿ 32 ಇಂಚಿನ ಎಲ್ಇಡಿ ಟಿವಿ ಹಾಗು ತೃತೀಯ ಬಹುಮಾನವಾಗಿ 5 ಮಂದಿಗೆ ಆಕರ್ಷಕ ಸ್ಮಾರ್ಟ್ ಫೋನ್ ನೀಡಲಾಗುವುದು.
ಅಲ್ಲದೆ ಗ್ರಾಹಕರ ಮನಸ್ಸಿಗೆ ಒಪ್ಪುವ, ನೆಚ್ಚಿನ ಲೇಟೆಸ್ಟ್ ಎಡಿಷನ್ ಸ್ಮಾರ್ಟ್ ಫೋನ್ ಖರೀದಿಸಿದರೆ ಸುಲಭ ಕಂತುಗಳಲ್ಲಿ, ಕನಿಷ್ಠ ದಾಖಲೆಯ ಆಧಾರದಲ್ಲಿ ಮೆಗಾ ಇಎಂಐ ಆಫರ್ ಒದಗಿಸಲಾಗುತ್ತದೆ.
ಹಳೆಯ ಮೊಬೈಲ್ಗಳನ್ನು ಹೊಸ ಸ್ಮಾರ್ಟ್ ಫೋನ್ಗಳೊಂದಿಗೆ ಬದಲಾಯಿಸುವ ‘ಮೆಗಾ ಎಕ್ಸೇಂಜ್ ಆಫರ್’ ಇದೆ. ದೀಪಾವಳಿ ಪ್ರಯುಕ್ತ ವಿವಿಧ ಖರೀದಿಗಳಿಗೆ ವಿಶೇಷ ರಿಯಾಯಿತಿ ನೀಡಲಾಗುತಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಆಕರ್ಷಕ ಸ್ಮಾರ್ಟ್ ಫೋನ್ಗಳು ಲಭ್ಯ:
”ಆಲ್ ಬ್ರ್ಯಾಂಡ್ಸ್ ಅಂಡರ್ ವನ್ ರೂಪ್” ಇದು ಮೊಬೈಲ್ ಗ್ಯಾರೇಜ್ ಮಳಿಗೆಯ ಟ್ಯಾಗ್ ಲೈನ್. ಟ್ಯಾಗ್ ಲೈನ್ ಹೇಳುವಂತೆ ಎಲ್ಲಾ ಕಂಪೆನಿಗಳ ಅತ್ಯಾಧುನಿಕ ಸ್ಮಾರ್ಟ್ ಫೋನ್ಗಳು ಇಲ್ಲಿ ಲಭ್ಯವಿದೆ. ಸ್ಮಾರ್ಟ್ ಫೋನ್ ಹಬ್ಬದ ಪ್ರಯುಕ್ತ ಸುಂದರ ಹಾಗು ಮನಮೋಹಕ ಮೊಬೈಲ್ ಫೋನ್ಗಳ ಆಕರ್ಷಕ ಸಂಗ್ರಹವೇ ಬಂದಿದೆ. ಎಲ್ಲಾ ಕಂಪೆನಿಗಳ ಲೇಟೆಸ್ಟ್ ಎಡಿಷನ್ ಫೋನ್ಗಳು ಲಭ್ಯವಿದೆ. ಪ್ರಸಿದ್ಧ ಸ್ಮಾರ್ಟ್ ಫೋನ್ ಕಂಪೆನಿಗಳಾದ ಆಫಲ್, ವನ್ ಪ್ಲಸ್, ಸ್ಯಾಮ್ಸಂಗ್, ವಿವೊ, ಒಪ್ಪೋ, ಎಂಐ, ರಿಯಲ್ ಮಿ, ನೋಕಿಯಾ.. ಹೀಗೆ ಎಲ್ಲಾ ಕಂಪೆನಿಗಳ ಮೊಬೈಲ್ ಫೋನ್ಗಳು ಲಭ್ಯವಿದೆ. ಜೊತೆಗೆ ಆಫಲ್ ಐ ಫೋನ್ ಸಹೀತ ಎಲ್ಲಾ ಮೊಬೈಲ್ಗಳ

ಸರ್ವೀಸ್ ಹಾಗು ದುರಸ್ತಿಯನ್ನು ಕ್ಲಿಪ್ತ ಸಮಯದಲ್ಲಿ ನುರಿತ ಟೆಕ್ನಿಷಿಯನ್ಗಳಿಂದ ಸ್ಪರ್ಧಾತ್ಮಕ ದರದಲ್ಲಿ ಮಾಡಿ ಕೊಡಲಾಗುವುದು ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ. ಎಲ್ಲಾ ಮೊಬೈಲ್ಗಳ ಅಸ್ಸಸರೀಸ್ಗಳನ್ನು ರಿಯಾಯತಿ ದರದಲ್ಲಿ ಒದಗಿಸಲಾಗುತ್ತದೆ.
ಒಂದು ಒಳ್ಳೆಯ ಸ್ಮಾರ್ಟ್ ಫೋನ್ ಕೈಯಲ್ಲಿದ್ದರೆ ಬದುಕಿನ ಆನಂದವೇ ಬೇರೆ. ಆಧುನಿಕ ಬದುಕಿನ ಅವಿಭಾಜ್ಯ ಅಂಗವಾದ ಸುಂದರ ಮತ್ತು ಆಕರ್ಷಕ ಸ್ಮಾರ್ಟ್ ಫೋನ್ ಪ್ರತಿಯೊಬ್ಬರ ಕನಸು. ನಿಮ್ಮ ಕನಸನ್ನು ನನಸಾಗಿಸಲು ಅತ್ಯಾಧುನಿಕ, ಅತ್ಯಾಕರ್ಷಕ ಸ್ಮಾರ್ಟ್ ಫೋನ್ಗಳ ಸಂಗ್ರಹದೊಂದಿಗೆ..ಮೊಬೈಲ್ ಖರೀದಿಗೆ ಆಕರ್ಷಕ ಆಫರ್ ಮತ್ತು ಅವಕಾಶಗಳನ್ನು ತೆರೆದಿಟ್ಟು ಮೊಬೈಲ್ ಗ್ಯಾರೇಜ್ ಕೈ ಬೀಸಿ ಕರೆಯುತಿದೆ.. ತಡವೇಕೆ… ಇಂದೇ ಭೇಟಿ ಕೊಡಿ..! ಆಕರ್ಷಕ ಸ್ಮಾರ್ಟ್ ಫೋನ್ಗಳೊಂದಿಗೆ ಸ್ಮಾರ್ಟ್ ಆಗಿ ಬದುಕನ್ನು ಎಂಜಾಯ್ ಮಾಡಿ..!!
(ಹೆಚ್ಚಿನ ಮಾಹಿತಿಗಳಿಗೆ ಕರೆ ಮಾಡಿ-8105100465)










