ಸುಳ್ಯ:ಸುಳ್ಯದ ಗೋಲ್ಡನ್ ಕ್ಲಬ್ ವತಿಯಿಂದ ಕುರುಂಜಿಗುಡ್ಡೆಯ ಇಂಡೋರ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ‘ಗೋಲ್ಡನ್ ಬರ್ಡ್’
ಶಟಲ್ ಬ್ಯಾಡ್ಮಿಂಟನ್ ಲೀಗ್ ಸೀಸನ್ 2ನಲ್ಲಿ ಫೀನಿಕ್ಸ್ ಶಟ್ಲರ್ಸ್ ತಂಡ ಚಾಂಪಿಯನ್ ಆಯಿತು. ಅನ್ನಿಹಿಲೇಟರ್ಸ್ ತಂಡ ರನ್ನರ್ ಅಪ್ ಆಯಿತು. ತೃತೀಯ ಸ್ಥಾನವನ್ನು
ರವಿ & ನೇಸರ್ ತಂಡ ಹಾಗು ಮಾಂಬ್ಲಿ ಸ್ಪೋರ್ಟ್ಸ್ ಕ್ಲಬ್ ತೃತೀಯ ಚತುರ್ಥ ಸ್ಥಾನ ಪಡೆಯಿತು. ಲೀಗ್ ಮಾದರಿಯಲ್ಲಿ ನಡೆದ ಪಂದ್ಯದಲ್ಲಿ 8 ತಂಡಗಳು ಭಾಗವಹಿಸಿದ್ದವು.
ಸಮಾರೋಪ ಸಮಾರಂಭದಲ್ಲಿ ಸಿಎ ರವೀಂದ್ರನಾಥ್, ಗೋಲ್ಡನ್ ಕ್ಲಬ್ನ ಅಧ್ಯಕ್ಷ ಪ್ರಮೋದ್ ನಾಯಕ್, ನಿರ್ದೇಶಕ ಗಂಗಾಧರ ಕಲ್ಲಪಳ್ಳಿ, ಅನಿಲ್, ಚೇತನ್, ವಿಘ್ನೇಶ್ ಮತ್ತಿತರರು ವಿಜೇತರಿಗೆ ಬಹುಮಾನ ವಿತರಿಸಿದರು.ಗೋಲ್ಡನ್ ಕ್ಲಬ್ನ ನಿರ್ದೇಶಕ ಶಶಿಕುಮಾರ್ ಕಾರ್ಯಕ್ರಮ ನಿರೂಪಿಸಿದರು.










