ಚಂಡೀಘಡ: ಕ್ರಿಕೆಟ್ ಲೊಕದ ಅದ್ಭುತ ಬಾಲಕ 15 ವರ್ಷದ ವೈಭವ್ ಸೂರ್ಯವಂಶಿ ಮತ್ತೊಮ್ಮೆ ಸ್ಪೋಟಕ ಬ್ಯಾಟಿಂಗ್ ಮೂಲಕ ವಿಸ್ಮಯ ಸೃಷ್ಠಿಸಿದ್ದಾರೆ. ಐಪಿಎಲ್ ಪ್ಲೇಆಪ್ನ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಸನ್ರೈಸರ್ಸ್ ಹೈದ್ರಾಬಾದ್ ತಂಡವನ್ನು ಎದುರಿಸುತಿದೆ. ಮೊದಲು ಬ್ಯಾಟಿಂಗ್ ನಡೆಸಿದ ರಾಜಸ್ಥಾನ್ ರಾಯಲ್ಸ್ ಪರ
ಸಿಕ್ಸರ್, ಬೌಂಡರಿಗಳ ಸುರಿಮಳೆಗೈದು ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ವೈಭವ್ ಕೇವಲ 29 ಎಸೆತಗಳಲ್ಲಿ 97 ರನ್ ಚಚ್ಚಿದರು.ಅಮೋಘ ಇನ್ನೀಂಗ್ಸ್ನಲ್ಲಿ 12 ಸಿಕ್ಸರ್ ಮತ್ತು 5 ಬೌಂಡರಿ ಒಳಗೊಂಡಿದೆ.3 ರನ್ ಅಂತರದಲ್ಲಿ ಐಪಿಎಲ್ನ ಅತಿ ವೇಗದ ಶತಕ ಸಿಡಿಸುವ ಅವಕಾಶವನ್ನು ತಪ್ಪಿಸಿಕೊಂಡರು. ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಈ ಹಿಂದೆ 30 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಸೂರ್ಯವಂಶಿ 28 ಎಸೆತಗಳಲ್ಲಿ 97 ರನ್ ಸಿಡಿಸಿದ್ದ ವೇಳೆ
ದಾಖಲೆಯ ನಿರ್ಮಿಸುವ ಸೂಚನೆ ನೀಡಿದರು. ಆದರೆ 29ನೇ ಎಸೆತದಲ್ಲಿ ಸಿಕ್ಸರ್ ಬಾರಿಸಲು ಮುಂದಾಗಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿ ಔಟಾಗಿ ನಿರಾಸೆ ಮೂಡಿಸಿದರು.ಸೂರ್ಯವಂಶಿ ಈ ಹಿಂದೆ 36 ಎಸೆತಗಳಲ್ಲಿ ಮತ್ತು 35 ಎಸೆತಗಳಲ್ಲಿ ಶತಕ ದಾಖಲಿಸಿದ್ದರು. ಆದರೆ ಒಂದು ಐಪಿಎಲ್ ಆವೃತ್ತಿಯಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಕ್ರಿಸ್ ಗೇಲ್ ದಾಖಲೆಯನ್ನು ಸೂರ್ಯವಂಶಿ ಮುರಿದರು. 15 ಪಂದ್ಯಗಳಿಂದ ಸೂರ್ಯವಂಶಿ 65 ಸಿಕ್ಸರ್ ಸಿಡಿಸಿದ್ದಾರೆ. ಇಂದು 12 ಸಿಕ್ಸರ್ ಸಿಡಿಸುವ ಮೂಲಕ ಕ್ರಿಸ್ ಗೇಲ್ ಸಿಡಿಸಿದ 59 ಸಿಕ್ಸರ್ ಎಂಬ ದಾಖಲೆ ಮುರಿದರು.15 ಪಂದ್ಯಗಳಿಂದ 580 ರನ್ ಗಳಿಸಿದ ವೈಭವ್ ಅತೀ ಹೆಚ್ಚು ಸ್ಕೋರ್ ಗಳಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.















