ಚಿತ್ರಗಳು:ನವೀನ್, ಸ್ಟುಡಿಯೋ ಗೋಪಾಲ್
ಸುಳ್ಯ:ಸುಳ್ಯದಲ್ಲಿ ಮಂಗಳವಾರ ಸಂಜೆ ಭಾರೀ ಮಳೆಯಾಗಿದೆ.ಇದರ ಪರಿಣಾಮ ನಗರದ ರಸ್ತೆಗಳು ಕಲಾ ವೃತವಾಗಿದೆ. ಸುಳ್ಯ ಶ್ರೀರಾಮ ಪೇಟೆ ಮತ್ತಿತರ ಕಡೆಗಳಲ್ಲಿ ಮಳೆ ನೀರು ರಸ್ತೆಯಲ್ಲಿಯೇ ಹರಿದಿದೆ. ಕೆಲವೆಡೆ


ಅಂಗಡಿ ಮುಂಗಟ್ಟುಗಳಿಗೆ ನುಗ್ಗಿದೆ. ಬೊಳುಬೈಲು ಸಮೀಪ ಮಳೆ ನೀರು ರಸ್ತೆಗೆ ನುಗ್ಗಿದೆ. ಹಲವು ಕಡೆಗಳಲ್ಲಿ ಮಳೆ ನೀರು ರಸ್ತೆಯಲ್ಲಿಯೇ ಹರಿದು ವಾಹನ ಸವಾರರಿಗೆ ಮತ್ತು ಪಾದಾಚಾರಿಗೆ ಸಮಸ್ಯೆಯಾಗಿದೆ.
ಬೆಳಿಗ್ಗಿನಿಂದ ಮೋಡ ಕವಿದ ವಾತಾವರಣ ಇತ್ತು. ಸಂಜೆಯ ವೇಳೆಗೆ ಉತ್ತಮ ಮಳೆ ಸುರಿದಿದೆ.ಹನಿ ಮಳೆಯೊಂದಿಗೆ ಆರಂಭಗೊಂಡು ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಮುರಾಸು ಚಂಡಮಾರುತದ ಪರಿಣಾಮವಾಗಿ ಎರಡು ದಿನಗಳಿಂದ ಕರ್ನಾಟಕ ರಾಜ್ಯದ ಹಲವೆಡೆ ಉತ್ತಮ ಮಳೆಯಾಗಿದೆ.













