ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ನ 19ನೇ ಆವೃತ್ತಿಯ ಪ್ರಶಸ್ತಿ ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಟ್ರೋಫಿ ಜೊತೆ 20 ಕೋಟಿ ನಗದು ಬಹುಮಾನ ಗೆದ್ದುಕೊಂಡಿದೆ. ರನ್ನರ್ ಅಪ್ ಗುಜರಾತ್ ಟೈಟನ್ಸ್ ತಂಡವು
12.5 ಕೋಟಿ ಪಡೆಯಲಿದೆ. ಕ್ವಾಲಿಫೈಯರ್ 2ರಲ್ಲಿ ಸೋತಿರುವ ರಾಜಸ್ಥಾನ ರಾಯಲ್ಸ್ ತಂಡವು 7 ಕೋಟಿ ಪಡೆದರೆ, ಎಲಿಮಿನೇಟರ್ ಪಂದ್ಯದಿಂದ ಹೊರಬಿದ್ದಿರುವ ಸನ್ರೈಸರ್ಸ್ ಹೈದರಾಬಾದ್ ತಂಡ 6.5 ಕೋಟಿ ಪಡೆದುಕೊಳ್ಳಲಿದೆ.
ಅಗ್ರ 4ರಲ್ಲಿ ಸ್ಥಾನ ಪಡೆಯುವ ತಂಡಗಳು ಸುಮಾರು 46 ಕೋಟಿಯಲ್ಲಿ ಹಂಚಿಕೆ ಮಾಡಿಕೊಳ್ಳಲಿವೆ. ಇನ್ನೂ ತಂಡಗಳು ಪಡೆಯುವ ಪ್ರಶಸ್ತಿ ಮೊತ್ತದಲ್ಲಿ ಅರ್ಧದಷ್ಟು ಹಣವನ್ನು ತಂಡದ ಆಟಗಾರರಿಗೆ ಹಂಚಿಕೆ ಮಾಡಬೇಕು ಎಂಬ ನಿಯಮ ಕೂಡ ಇದೆ.
ಐಪಿಎಲ್ ಪ್ರಾರಂಭಿಕ ಆವೃತ್ತಿಯಲ್ಲಿ ಈ ಬಹುಮಾನದ ಮೊತ್ತವು ವಿಜೇತ ತಂಡಕ್ಕೆ 4.8 ಕೋಟಿ ಸಿಗುತ್ತಿತ್ತು.














