ಸುಳ್ಯ:ಜೇಸಿಐ ಸುಳ್ಯ ಪಯಸ್ವಿನಿ ಘಟಕ್ಕಕ್ಕೆ ಜೇಸಿಐ ಮಧ್ಯಂತರ ಸಮ್ಮೇಳನದಲ್ಲಿ ಡೈಮಂಡ್ ಘಟಕ ಪ್ರಶಸ್ತಿ, ಔಟ್ ಸ್ಟಾಂಡಿಂಗ್ ಘಟಕ ಪ್ರಶಸ್ತಿ ಹಾಗು ಮೌರ್ಯ ದಳಪತಿ ಪುರಸ್ಕಾರ ಲಭಿಸಿದೆ.
ಕಾಪುವಿನಲ್ಲಿ ನಡೆದ ವಲಯ ಮಟ್ಟದ ಮಧ್ಯಂತರ ಸಮ್ಮೇಳನದಲ್ಲಿ
ವಲಯಾಧ್ಯಕ್ಷ ಎಸ್. ಸಂತೋಷ್ ಶೆಟ್ಟಿ ಅವರಿಂದ ಘಟಕಾಧ್ಯಕ್ಷೆ ಲತಾಶ್ರೀ ಸುಪ್ರೀತ್ ಮೋಂಟಡ್ಕ ತಂಡ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ರೀಜನ್ ಬಿ ವಲಯಮಟ್ಟದ ಜೇಸಿಐ ಔಟ್ ಸ್ಟಾಂಡಿಂಗ್ ಘಟಕ ರನ್ನರ್ ಆಫ್, ಔಟ್ ಸ್ಟಾಂಡಿಂಗ್ ಪ್ರೆಸಿಡೆಂಟ್ ದ್ವಿತೀಯ ಪ್ರಶಸ್ತಿ, ಡೈಮಂಡ್ ಘಟಕ ಪ್ರಶಸ್ತಿ,ಮೌರ್ಯ ದಳಪತಿ ಪುರಸ್ಕಾರ ಸೇರಿ ಹಲವು ಪುರಸ್ಕಾರ ಲಭಿಸಿದೆ. ಈ ಸಂದರ್ಭದಲ್ಲಿ ಪೂರ್ವಾಧ್ಯಕ್ಷರಾದ ಗುರುರಾಜ್ ಅಜ್ಜಾವರ, ನವೀನ್ ಕುಮಾರ್, ಸುರೇಶ್ ಕಾಮತ್, ಕಾರ್ಯದರ್ಶಿ ತಾರಾ ಮಾದವ ಚೂಂತಾರು, ಜತೆ ಕಾರ್ಯದರ್ಶಿ ವಿನೋದ್ ಮೂಡಗದ್ದೆ,
ಸದಸ್ಯರಾದ ಉಮೇಶ್ ಬೊಳುಗಲ್ಲು,ಮಹೇಶ್ ಮೇರ್ಕಜೆ, ಪ್ರಶಾಂತ್ ಅಂಬೆಕಲ್ಲು, ಸತ್ಯ ಶಾಂತಿ ತ್ಯಾಗ ಮೂರ್ತಿ, ಸುಪ್ರೀತ್ ಮೋಂಟಡ್ಕ ಉಪಸ್ಥಿತರಿದ್ದರು.














