ಹೈದರಾಬಾದ್: ಐಪಿಎಲ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಕೋಲ್ಕತ್ತ ನೈಟ್ರೈಡರ್ಸ್ ತಂಡ 7 ವಿಕೆಟ್ಗಳ ಗೆಲುವು ಸಾಧಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಎಸ್ಆರ್ಎಚ್ 19 ಓವರ್ಗಲ್ಲಿ 165 ರನ್ಗಳಿಸಿ ಆಲೌಟ್ ಆಯಿತು. 166 ರನ್ ಗುರಿ ಬೆನ್ನತ್ತಿದ ಕೆಕೆಆರ್ 18.2 ಓವರ್ಗಳಲ್ಲಿ
3 ವಿಕೆಟ್ ನಷ್ಟಕ್ಕೆ169 ರನ್ ಗಳಿಸಿ ಗೆಲುವಿನ ಗಡಿ ದಾಟಿತು. ಆರಂಭಿಕ ಫಿನ್ ಅಲೆನ್ ಸ್ಫೋಟಕ ಆರಂಭ ಒದಗಿಸಿದರು. 13 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ಸಹಿತ 29 ರನ್ ಗಳಿಸಿ, ಪ್ಯಾಟ್ ಕಮಿನ್ಸ್ಗೆ ವಿಕೆಟ್ ಒಪ್ಪಿಸಿದರು.ನಾಯಕ ಅಜಿಂಕ್ಯ ರಹಾನೆ (43 ರನ್: 36 ಎಸೆತ) ಹಾಗೂ ಅಂಗ್ಕ್ರಿಷ್ ರಘುವಂಶಿ (59 ರನ್: 47 ಎಸೆತ) ಎರಡನೇ ವಿಕೆಟ್ಗೆ 84 ರನ್ಗಳ ಜೊತೆಯಾಟವಾಡಿದರು.
ಇದಕ್ಕೂ ಮೊದಲು ಎಸ್ಆರ್ಎಚ್ಗೆ ಟ್ರಾವಿಸ್ ಹೆಡ್ (61 ರನ್; 28 ಎಸೆತ) ಹಾಗೂ ಇಶಾನ್ ಕಿಶನ್ (42 ರನ್; 29 ಎಸೆತ) ಅವರ ಬ್ಯಾಟಿಂಗ್ ಬಲ ತುಂಬಿತು. ಎಸ್ಆರ್ಎಚ್ನ ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ವೈಫಲ್ಯ ಅನುಭವಿಸಿದರು. ಹೆನ್ರಿಚ್ ಕ್ಲಾಸೆನ್ 11 ರನ್, ಕನ್ನಡಿಗ ಸಮ್ರಾನ್ ರವಿಚಂದ್ರನ್ 4 ರನ್, ಅನಿಕೇತ್ ವರ್ಮಾ 6 ರನ್, ಸಲೀಲ್ ಆರೋರ 2 ರನ್, ನಾಯಕ ಕಮಿನ್ಸ್ 10 ರನ್ ಗಳಿಸಿದರು. ಕೆಕೆಆರ್ ಪರ ವರುಣ್ ಚಕ್ರವರ್ತಿ 3 ವಿಕೆಟ್, ಸುನಿಲ್ ನರೇನ್, ಕಾರ್ತಿಕ್ ತ್ಯಾಗಿ 2 ವಿಕೆಟ್ ಪಡೆದರು. ವೈಭವ್ ಆರೋರ, ಗ್ರೀನ್, ಅಂಕುಲ್ ರಾಯ್ ತಲಾ 1 ವಿಕೆಟ್ ಕಬಳಿಸಿದರು.
ಈ ಗೆಲುವಿನ ಮೂಲಕ ಕೆಕೆಆರ್ ತಂಡವು 9 ಪಂದ್ಯಗಳಲ್ಲಿ 7 ಅಂಕಗಳೊಂದಿಗೆ 8 ಸ್ಥಾನದಲ್ಲಿದ್ದು, ಪ್ಲೇ–ಆಫ್ ಆಸೆ ಜೀವಂತವಾಗಿದೆ.












