ಸುಳ್ಯ:2027ನೇ ಸಾಲಿನ ಜೇಸಿಐ ಭಾರತ ವಲಯ 15ರ ವಲಯ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ, ಜೇಸಿಐ ಸುಳ್ಯ ಪಯಸ್ವಿನಿ ಘಟಕಾಧ್ಯಕ್ಷೆ ಲತಾಶ್ರೀ ಸುಪ್ರೀತ್ ಮೋಂಟಡ್ಕ ಆಯ್ಕೆಯಾಗಿದ್ದಾರೆ. ಐದು ಉಪಾಧ್ಯಕ್ಷ ಹುದ್ದೆಗೆ
ಎಂಟು ಮಂದಿ ನಾಮಪತ್ರ ಸಲ್ಲಿಸಿದರು.ಮೂರು ಮಂದಿ ಅವಿರೋಧವಾಗಿ ಆಯ್ಕೆಗೊಂಡಿದ್ದು, ಎರಡು ಹುದ್ದೆಗೆ ಮೂರು ಅಭ್ಯರ್ಥಿಗಳ ನಡುವೆ ಸ್ಪರ್ಧೆ ನಡೆದು ಆಯ್ಕೆಯಾದರು.
ಮಂಗಳೂರಿನ ಅಡ್ಯಾರ್ ಗಾರ್ಡನ್ ಸಭಾಂಗಣದಲ್ಲಿ ನಡೆದ ಜೇಸಿಐ ಭಾರತ ವಲಯ 15ರ ವಲಯ ಸಮ್ಮೇಳನ ಆರ್ಯ -2026 ರಲ್ಲಿ ಆಯ್ಕೆ ನಡೆಯಿತು.










