ಅಹಮದಾಬಾದ್:ಕೊನೆಯ ಓವರ್ವರೆಗೆ ಸಾಗಿದ ಐಪಿಎಲ್ನ ರೋಚಕ ಹಣಾಹಣಿಯಲ್ಲಿ ಗುಜರಾತ್ ಟೈಟನ್ಸ್ ತಂಡವು ಪಂಜಾಬ್ ಕಿಂಗ್ಸ್ ತಂಡವನ್ನು ನಾಲ್ಕು ವಿಕೆಟ್ಗಳಿಂದ ಮಣಿಸಿತು. ಇದರೊಂದಿಗೆ ಶುಭಮನ್ ಗಿಲ್ ಪಡೆ ಹಾಲಿ ಆವೃತ್ತಿಯಲ್ಲಿ ಎರಡನೇ ಬಾರಿ ಹ್ಯಾಟ್ರಿಕ್ ಗೆಲುವು ದಾಖಲಿಸಿತು.ಟಾಸ್ ಗೆದ್ದ ಗುಜರಾತ್ ತಂಡವು ಫೀಲ್ಡಿಂಗ್ ಆಯ್ದುಕೊಂಡಿತು.ಮೊದಲು ಬ್ಯಾಟ್ ಮಾಡಿದ ಪಂಜಾಬ್ 20 ಓವರ್ಗಳಲ್ಲಿ
9 ವಿಕೆಟ್ಗೆ 163 ರನ್ಗಳ ಸಾಧಾರಣ ಮೊತ್ತ ಗಳಿಸಿತು.ಗುರಿ ಬೆನ್ನಟ್ಟಿದ ಗುಜರಾತ್ ಆರಂಭಿಕ ಆಟಗಾರ ಸಾಯಿ ಸುದರ್ಶನ್ (57;41ಎ) ಮತ್ತು ವಾಷಿಂಗ್ಟನ್ ಸುಂದರ್ (ಔಟಾಗದೇ 40;23ಎ) ಅವರ ಬ್ಯಾಟಿಂಗ್ ನೆರವಿನಿಂದ ಒಂದು ಎಸೆತ ಬಾಕಿ ಇರುವಂತೆ 6 ವಿಕೆಟ್ಗೆ 167 ರನ್ ಗಳಿಸಿ ಸಂಭ್ರಮಿಸಿತು. ಪಂಜಾಬ್ ತಂಡಕ್ಕೆ ಇದು ಲೀಗ್ನಲ್ಲಿ ಎರಡನೇ ಸೋಲು.ಗುಜರಾತ್ ಇನಿಂಗ್ಸ್ನ ಎರಡನೇ ಓವರ್ನಲ್ಲಿ ಶುಭಮನ್ (5) ಪೆವಿಲಿಯನ್ ಸೇರಿಕೊಂಡರು. ಸಾಯಿ ಮತ್ತು ಜೋಸ್ ಬಟ್ಲರ್ (26;22) ಎರಡನೇ ವಿಕೆಟ್ಗೆ 53 (40ಎ) ರನ್ ಸೇರಿಸಿದರು. ನಿಶಾಂತ್ ಸಿಂಧು (15) ರನ್ಗಳಿಸಿದರು. ಕೊನೆಯಲ್ಲಿ ವಾಷಿಂಗ್ಟನ್ ಸುಂದರ್ ಜವಾಬ್ದಾರಿಯುತ ಆಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಇದಕ್ಕಿಂತ ಮುನ್ನ ವೇಗದ ಬೌಲರ್ಗಳಾದ ಜೇಸನ್ ಹೋಲ್ಡರ್ (24ಕ್ಕೆ 4), ಮೊಹಮ್ಮದ್ ಸಿರಾಜ್ (28ಕ್ಕೆ 2) ಮತ್ತು ಕಗಿಸೊ ರಬಾಡ (22ಕ್ಕೆ 2) ಸಂಘಟಿತ ದಾಳಿಯ ಮುಂದೆ ತಡವರಿಸಿದ ಪಂಜಾಬ್ಗೆ ಸೂರ್ಯಾಂಶ್ ಶೆಡ್ಗೆ (57, 29 ಎಸೆತ) ಮತ್ತು ಮಾರ್ಕಸ್ ಸ್ಟೊಯಿನಿಸ್ (40;31ಎ) ಉಪಯುಕ್ತ ಕಾಣಿಕೆ ನೀಡಿದರು.ಒಂದು ಹಂತದಲ್ಲಿ (8.5 ಓವರ್ಗಳಲ್ಲಿ) 47 ರನ್ಗಳಾಗುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಕುಸಿತದ ಅಪಾಯದಲ್ಲಿತ್ತು. ಆದರೆ ಶೆಡ್ಗೆ ಜೊತೆಗೂಡಿದ ಸ್ಟೊಯಿನಿಸ್ ಆರನೇ ವಿಕೆಟ್ಗೆ 79 ರನ್ ಸೇರಿಸಿದ್ದರಿಂದ ತಂಡದ ಸ್ಥಿತಿ ಗಮನಾರ್ಹವಾಗಿ ಸುಧಾರಿಸಿತು.ಶೆಡ್ಗೆ 3 ಬೌಂಡರಿಗಳ ಮತ್ತು ಐದು ಸಿಕ್ಸರ್ಗಳನ್ನೆತ್ತಿದರು. ಎಡಗೈ ಸ್ಪಿನ್ನರ್ ಮಾನವ್ ಸುತಾರ್ ಅವರ ಒಂದೇ ಓವರಿನಲ್ಲಿ ಶೆಡ್ಗೆ 26 ರನ್ (6,6,4,4,6) ಚಚ್ಚಿದ ಅವರು 24 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದರು.












