ಸುಳ್ಯ:ಸುಳ್ಯಕ್ಕೆ ಬಿಜೆಪಿ ಸರಕಾರದ ಸಂದರ್ಭದಲ್ಲಿ ಸಾವಿರ ಮನೆಗಳು ಬಂದಿದೆ, ಆದರೆ ಇದೀಗ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಒಂದೇ ಒಂದು ಮನೆ ಬರುತ್ತಿಲ್ಲ, ಕಾಂಗ್ರೆಸ್ ಸರಕಾರದ ಜನ ವಿರೋಧಿ ನೀತಿಯ ವಿರುದ್ಧ ಹೋರಾಟ ನಡೆಸುತ್ತಿದ್ದು ಸರಕಾರವನ್ನು ಕಿತ್ತುಗೊಯುವ ತನಕ ವಿರಮಿಸುವುದಿಲ್ಲ ಎಂದು ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.ರಾಜ್ಯದ ಕಾಂಗ್ರೆಸ್ ಸರಕಾರ ಜನ ವಿರೋಧಿ ನೀತಿಯನ್ನು ಅನುಸರಿಸುತಿದೆ ಎಂದು ಆರೋಪಿಸಿ
ಬಿಜೆಪಿ ಮಂಡಲ ಸಮಿತಿ ವತಿಯಿಂದ ನಗರ ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಮುಂಭಾಗ ಹಮ್ಮಿಕೊಂಡ ಪ್ರತಿಭಟನೆ ಹಿನ್ನಲೆಯಲ್ಲಿ ಅಜ್ಜಾವರ ಗ್ರಾಮ ಪಂಚಾಯತ್ ಮುಂಭಾಗದಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಸಮಿತಿ ಕೋಶಾಧಿಕಾರಿ ಸುಬೋದ್ ಶೆಟ್ಟಿ ಮೇನಾಲ , ತಾ.ಪಂ ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ , ಸುಳ್ಯ ಸಿಎ ಬ್ಯಾಂಕ್ ಅಧ್ಯಕ್ಷ ವಿಕ್ರಂ ಎ ವಿ ಅಡ್ಪಂಗಾಯ, ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಸತ್ಯವತಿ ಬಸವನಪಾದೆ, ಜಯಂತಿ ಜನಾರ್ಧನ, ಪ್ರಮುಖರಾದ ರಾಜೇಶ್ ಶೆಟ್ಟಿ ಮೇನಾಲ , ಜಿಜಿ ನಾಯಕ್ , ಮನ್ಮಥ ಎ ಎಸ್ , ಗುರುರಾಜ್ ಅಜ್ಜಾವರ , ಗಿರಿಧರ ನಾರಾಲು,ಲೋಕೇಶ್ ಅಡ್ಡಂತ್ತಡ್ಕ ,ಹರಿಪ್ರಸಾದ್ ಸುಲಾಯ, ಪ್ರಬೋದ್ ಶೆಟ್ಟಿ ಮೇನಾಲ , ಕಮಲಾಕ್ಷ ರೈ ಬಾಡೇಲು , ಹರ್ಷಿತ್ , ಹರಿಣಿ ಬೇಲ್ಯ, ಕಿಟ್ಟಣ್ಣ ರೈ ಮೇನಾಲ, ನಯನ್ ರೈ ಮೇನಾಲ , ಕಾರ್ತಿಕ್ ರಮೇಶ್ ದೊಡ್ಡೇರಿ , ರಮೇಶ್ ಮೇದಿನಡ್ಕ , ವಿನಯ ಕರ್ಲಪ್ಪಾಡಿ , ದಯಾಳ್ ಮೇದಿನಡ್ಕ, ವಸಂತಿ ಕರ್ಲಪ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.