ನವದೆಹಲಿ:ಫಿನ್ ಅಲೆನ್ ಸಿಡಿಸಿದ ಸ್ಫೋಟಕ ಶತಕದ ನೆರವಿನಿಂದ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸುಲಭ ಜಯ ದಾಖಲಿಸಿತು.ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತ ತಂಡದ ಸ್ಪಿನ್ ದಾಳಿಗೆ ಸಿಲುಕಿದ ಡೆಲ್ಲಿ ತಂಡವು 20 ಓವರ್ಗಳಲ್ಲಿ
8 ವಿಕೆಟ್ಗಳಿಗೆ 142 ರನ್ ಮಾತ್ರ ಗಳಿಸಿತು. ಫಿನ್ ಅಲೆನ್ ಅಜೇಯ ಶತಕ (100; 47ಎ, 4X5, 6X10)ದ ಬಲದಿಂದ ಕೆಕೆಆರ್ ತಂಡವು 14. 2 ಓವರ್ಗಳಲ್ಲಿ 2 ವಿಕೆಟ್ಗಳಿಗೆ 147 ರನ್ ಗಳಿಸಿ ಜಯಿಸಿತು. ಕೋಲ್ಕತ್ತ ತಂಡದ ವೇಗಿ ಕಾರ್ತಿಕ್ ತ್ಯಾಗಿ (25ಕ್ಕೆ2), ವೈಭವ್ ಅರೋರಾ (29ಕ್ಕೆ1) ಮತ್ತು ಕ್ಯಾಮರಾನ್ ಗ್ರೀನ್ (12ಕ್ಕೆ1), ಅನುಕೂಲ್ ರಾಯ್ (31ಕ್ಕೆ2), ಸುನಿಲ್ ನಾರಾಯಣ್ (17ಕ್ಕೆ1) ವಿಕೆಟ್ ಗಳಿಸಿದರು.
ಆಶುತೋಷ್ ಶರ್ಮಾ ಅವರು 28 ಎಸೆತಗಳಲ್ಲಿ 39 ರನ್ ಸಿಡಿಸಿ ಡೆಲ್ಲಿ ತಂಡಕ್ಕೆ ಚೇತರಿಕೆ ನೀಡಿದರು. ಆರಂಭಿಕ ಬ್ಯಾಟರ್ ನಿಸಾಂಕ (50; 29ಎ, 4X5, 6X3) ಮತ್ತು ಕೆ.ಎಲ್. ರಾಹುಲ್ (23; 14ಎ, 4X4) ಅವರು ಉತ್ತಮ ಆರಂಭ ನೀಡಿದರು. ಕೋಲ್ಕತ್ತ ತಂಡದ ಬೌಲರ್ಗಳು ಪವರ್ಪ್ಲೇ ಹಂತದಲ್ಲಿಯೇ ಆತಿಥೇಯರಿಗೆ ಆಘಾತ ನೀಡಿದರು.
ತಂಡವು 89 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ ಆಶುತೋಷ್ ಅವರು ಬೀಸಾಟದ ಮೂಲಕ ಒಂದಿಷ್ಟು ಚೇತರಿಕೆ ನೀಡಿದರು.











