ಲಂಡನ್: ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಇವರು 2024ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಲೇಬರ್ ಪಕ್ಷದಿಂದ ಜಯ ಸಾಧಿಸಿ ಅಧಿಕಾರಕ್ಕೇರಿದ್ದರು. ಪ್ರಧಾನಿಯಾದ
2 ವರ್ಷಗಳಲ್ಲೇ ತಮ್ಮ ಹುದ್ದೆಗೆ ರಾಜೀನಾಮೆ ಘೋಷಿಸಿದ್ದಾರೆ.63 ವರ್ಷದ ಕೀರ್ ಸ್ಟಾರ್ಮರ್, ಬ್ರಿಟನ್ನ 58 ನೇ ಪ್ರಧಾನಿ ಹಾಗೂ ಲೇಬರ್ ಪಕ್ಷದ 7ನೇ ಪ್ರಧಾನಿಯಾಗಿದ್ದಾರೆ. ಸದ್ಯ ಸರ್ಕಾರದೊಳಗೆ ಉಂಟಾದ ಆಂತರಿಕ ಭಿನ್ನಾಭಿಪ್ರಾಯಗಳಿಂದಾಗಿ ರಾಜೀನಾಮೆ ಘೋಷಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಮಾತನಾಡಿರುವ ಸ್ಟಾರ್ಮರ್, ‘ನಾನು ಪ್ರೀತಿಸುವ ದೇಶವನ್ನು ಮುಂಚೂಣಿಗೆ ತರುವ ಉದ್ದೇಶದ ಸಲುವಾಗಿಯೇ ಪ್ರತಿಯೊಂದು ನಿರ್ಧಾರವನ್ನೂ ಕೈಗೊಂಡಿದ್ದೆ. ಅದೇ ಕಾರಣಕ್ಕಾಗಿ ಇದೀಗ ರಾಜೀನಾಮೆ ಘೋಷಿಸುತ್ತಿದ್ದೇನೆ’ ಎಂದು ಹೇಳಿದ್ದಾರೆ.






