ಟೆಲ್ ಅವೀವ್: ಇಸ್ರೇಲ್ ಚುನಾವಣೆಯಲ್ಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬಣವು ಬಹುಮತದ ಕೊರತೆ ಎದುರಿಸುತ್ತಿರುವುದರಿಂದ ಸರ್ಕಾರ ರಚನೆ ಅನಿಶ್ಚಿತವಾಗಿದೆ.120 ಸದಸ್ಯ ಬಲದ ಸಂಸತ್ತಿನಲ್ಲಿ ಬಹುಮತಕ್ಕೆ 61 ಸ್ಥಾನಗಳು ಬೇಕಾಗುತ್ತವೆ. ನೆತನ್ಯಾಹು ನೇತೃತ್ವದ
ಲಿಕುಡ್ ಪಕ್ಷವು 53 ಸ್ಥಾನಗಳಲ್ಲಿ ಜಯಗಳಿಸಿದೆ. ಬಹುಮತಕ್ಕೆ ಅಗತ್ಯವಿರುವುದಕ್ಕಿಂತ 8 ಸ್ಥಾನಗಳ ಕೊರತೆಯನ್ನು ಎದುರಿಸುತ್ತಿದೆ. ಹೊಸ ಸರ್ಕಾರ ರಚನೆಯಲ್ಲಿ ಅರಬ್ ಪಕ್ಷಗಳೊಂದಿಗೆ ಕೈಜೋಡಿಸುವುದಿಲ್ಲ ಎಂದು ನೆತನ್ಯಾಹು ಈಗಾಗಲೇ ಹೇಳಿರುವುದರಿಂದ ಬಿಕ್ಕಟ್ಟು ತಲೆದೋರಿದೆ. ಮಾಜಿ ಸೇನಾ ಮುಖ್ಯಸ್ಥ ಐಸೆನ್ಕೋಟ್ ನೇತೃತ್ವದ ವಿರೋಧ ಪಕ್ಷಗಳ ಮೈತ್ರಿಕೂಟವು 48 ಸ್ಥಾನಗಳಲ್ಲಿ ಹಾಗೂ ಅರಬ್ ಪಕ್ಷಗಳು 19 ಸ್ಥಾನಗಳಲ್ಲಿ ಜಯಗಳಿಸಿವೆ ಎಂದು ಇಸ್ರೇಲ್ನ ಕೇಂದ್ರ ಚುನಾವಣಾ ಸಮಿತಿಯು ತಿಳಿಸಿದೆ.









