ಟೋಕಿಯೊ:ಜಪಾನ್ ದಕ್ಷಿಣ ಭಾಗದ ಮುಖ್ಯ ದ್ವೀಪವಾದ ಕ್ಯುಶುದಲ್ಲಿನ ಕುಮಮೊಟೊದಲ್ಲಿ 7.1 ತೀವ್ರತೆಯ ಭೂಕಂಪ ಸಂಭವಿಸಿದ್ದು, ಸುನಾಮಿಯ ಮುನ್ನೆಚ್ಚರಿಕೆಯನ್ನು ನೀಡಲಾಗಿತ್ತು. ಭೂಕಂಪದಿಂದ
ಸುರಕ್ಷತಾ ಪರಿಶೀಲನೆಗಾಗಿ
ಕ್ಯುಶುದಲ್ಲಿ ಬುಲೆಟ್ ರೈಲು ಮತ್ತು ಸ್ಥಳೀಯ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಭೂಕಂಪದ ಪರಿಣಾಮ ಹಲವು ಮಂದಿ ಗಾಯಗೊಂಡಿರುವ ಮತ್ತು ಸ್ವತ್ತುಗಳಿಗೆ ಹಾನಿಯಾಗಿರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಭೂಕಂಪದ ನಂತರ ಹಲವು ಬಾರಿ ಅನುಕಂಪಗಳು ಸಂಭವಿಸಿವೆ.
1 ಮೀಟರ್ ಎತ್ತರದ ಸುನಾಮಿ ಅಲೆಗಳು ಅಪ್ಪಳಿಸುವ ಸಾಧ್ಯತೆ ಇರುವುದರಿಂದ ಜನರು ಎಚ್ಚರ ವಹಿಸುವಂತೆ ಸೂಚಿಸಲಾಗಿತ್ತು. ಭೂಕಂಪದ ಹಾನಿಯ ಬಗ್ಗೆ ಪರಿಶೀಲನೆ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಕಾರ್ಯಪಡೆಯನ್ನು ರಚಿಸಲಾಗಿದೆ ಎಂದು ಜಪಾನ್ನ ಅಧಿಕಾರಿಗಳು ಹೇಳಿದ್ದಾರೆ.









