ಜೆರುಸಲೇಂ: ಇಸ್ರೇಲ್ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಲ್ಲಿ ಸಾರ್ವತ್ರಿಕ ಚುನಾವಣೆಯ ಬಳಿಕ ನೂತನ ಸರ್ಕಾರ ರಚಿಸಲು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಪ್ರತಿಸ್ಪರ್ಧಿ ಮಾಜಿ ಸೇನಾ ಮುಖ್ಯಸ್ಥ ಗಡಿ ಐಸೆನ್ಕೋಟ್ ಅವರಿಗೆ ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜಾಗ್ ಆಹ್ವಾನ ನೀಡಿದ್ದಾರೆ. ಇಸ್ರೇಲ್ನಲ್ಲಿ ನಡೆದ
ಸಾರ್ವತ್ರಿಕ ಚುನಾವಣೆ ಬಳಿಕ ರಾಜಕೀಯ ಸಮೀಕರಣಗಳು ಬದಲಾಗಿದ್ದು, ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಹಿನ್ನಡೆಯಾಗಿದೆ.ಇಸ್ರೇಲ್ ಅಧ್ಯಕ್ಷ ಐಸಾಕ್ ಹರ್ಜೋಗ್ ಅವರು, ನೆತನ್ಯಾಹು ಅವರ ಪ್ರಮುಖ ಪ್ರತಿಸ್ಪರ್ಧಿ ಹಾಗೂ ‘ಯಶಾರ್’ ಪಕ್ಷದ ನಾಯಕ ಗಡಿ ಐಸೆನ್ಕೋಟ್ ಅವರನ್ನು ಹೊಸ ಸರ್ಕಾರ ರಚಿಸುವಂತೆ ಅಧಿಕೃತವಾಗಿ ಆಹ್ವಾನಿಸಿದ್ದಾರೆ.
ಚುನಾವಣಾ ಫಲಿತಾಂಶದ ಬಳಿಕ 120 ಸದಸ್ಯ ಬಲದ ‘ನೆಸೆಟ್’ನಲ್ಲಿ ಗಡಿ ಐಸೆನ್ಕೋಟ್ ಅವರು ಒಟ್ಟು 67 ಶಾಸಕರ ಬೆಂಬಲ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಮೈತ್ರಿಕೂಟ ರಚಿಸಿ ಅಧಿಕಾರ ಹಿಡಿಯಲು ಅವರಿಗೆ ಮೊದಲ ಅವಕಾಶ ದೊರಕಿದೆ. ಇದು ನೆತನ್ಯಾಹು ಅವರ ದೀರ್ಘಕಾಲದ ರಾಜಕೀಯ ಹಿಡಿತಕ್ಕೆ ಅಂತ್ಯ ಹಾಡಬಹುದಾದ ಸಾಧ್ಯತೆಯಿದೆ.ಒಂದು ವೇಳೆ ಅವರು ಸರ್ಕಾರ ರಚಿಸುವಲ್ಲಿ ವಿಫಲವಾದರೆ, ರಾಜಕೀಯ ಅನಿಶ್ಚಿತತೆ ಮುಂದುವರಿದು ಇಸ್ರೇಲ್ ಮತ್ತೊಮ್ಮೆ ಚುನಾವಣೆಯನ್ನು ಎದುರಿಸಬೇಕಾದ ಪರಿಸ್ಥಿತಿ ಎದುರಾಗಬಹುದು.
































