ಯೂರೋಪ್: ಸಂಪೂರ್ಣ ಸೂರ್ಯಗ್ರಹಣ ಆ.12 ರಂದು ಸಂಭವಿಸಲಿದೆ. ಯೂರೋಪ್ನ ವಿವಿಧ ಭಾಗಗಳಲ್ಲಿ ಸೂರ್ಯಗ್ರಹಣ ಗೋಚರಿಸಲಿದೆ.1999ರ ನಂತರ ಯುರೋಪಿನ ಮುಖ್ಯ ಭೂಭಾಗದಲ್ಲಿ ಇದೇ ಮೊದಲ ಬಾರಿಗೆ ಸಂಪೂರ್ಣ ಸೂರ್ಯಗ್ರಹಣ ಸಂಭವಿಸಲಿದೆ. ಸಂಪೂರ್ಣ ಸೂರ್ಯಗ್ರಹಣವನ್ನು
ಖಗ್ರಾಸ ಸೂರ್ಯಗ್ರಹಣ ಎಂತಲೂ ಕರೆಯಲಾಗುತ್ತದೆ. ಚಂದ್ರನು ಭೂಮಿ ಮತ್ತು ಸೂರ್ಯನ ನಡುವೆ ನೇರವಾಗಿ ಹಾದು ಹೋಗುತ್ತಾನೆ. ಈ ವೇಳೆ ಚಂದ್ರನು ಭೂಮಿ ಮತ್ತು ಸೂರ್ಯನ ನಡುವೆ ಅಡ್ಡಲಾಗಿ ಬಂದು ಸೂರ್ಯನ ಬೆಳಕು ಭೂಮಿಗೆ ತಲುಪದಂತೆ ತಡೆಯುತ್ತಾನೆ. ಆಗ ಸಂಪೂರ್ಣ ಸೂರ್ಯಗ್ರಹಣ ಸಂಭವಿಸುತ್ತದೆ ಎನ್ನುತ್ತಾರೆ ಖಗೋಳಶಾಸ್ತ್ರಜ್ಞರು.
ಸಂಪೂರ್ಣ ಸೂರ್ಯಗ್ರಹಣದ ವೇಳೆ ಯೂರೋಪಿನ ಕೆಲ ದೇಶಗಳಲ್ಲಿ ಹಗಲಿನಲ್ಲಿಯೇ ಕತ್ತಲು ಸಂಭವಿಸುತ್ತದೆ. ಸುಮಾರು 3 ದಶಕಗಳ ಹಿಂದೆ ಈ ಪ್ರದೇಶವು ಸಂಪೂರ್ಣ ಸೂರ್ಯಗ್ರಹವನ್ನು ನೋಡಿತ್ತು. ಅಂದರೆ, 1999ರ ಆಗಸ್ಟ್ 11ರಂದು ಸೂರ್ಯಗ್ರಹಣ ನಡೆದಿತ್ತು.
ಖಗೋಳಶಾಸ್ತ್ರಜ್ಞರ ಪ್ರಕಾರ ರಷ್ಯಾದ ಉತ್ತರ ಸೈಬೀರಿಯಾ ಪ್ರದೇಶದಿಂದ ಆರಂಭವಾಗಿ, ಗ್ರೀನ್ಲ್ಯಾಂಡ್, ಐಸ್ಲ್ಯಾಂಡ್, ಅಟ್ಲಾಂಟಿಕ್ ಸಾಗರ ದಾಟಿ ಸ್ಪೇನ್ ಮತ್ತು ಪೋರ್ಚುಗಲ್ನ ಸಣ್ಣ ಭಾಗ ಸೇರಿ ಯೂರೋಪ್ನ ವಿವಿಧ ಕಡೆಗಳಲ್ಲಿ ಸಂಪೂರ್ಣ ಸೂರ್ಯಗ್ರಹಣ ಗೋಚರಿಸಲಿದೆ.
ಭಾರತದಲ್ಲಿ ಆಗಸ್ಟ್ 12ರಂದು ಸಂಭವಿಸುವ ಸಂಪೂರ್ಣ ಸೂರ್ಯಗ್ರಹಣ ಗೋಚರಿಸುವುದಿಲ್ಲ ಎಂದು ಖಗೋಳಶಾಸ್ತ್ರಜ್ಞರು ಹೇಳುತ್ತಾರೆ.





























