ನಾಗೋಯಾ:ಭಾರತದ ಸಾವನ್ ಬರ್ವಾಲ್ ಅವರು ಏಷ್ಯನ್ ಗೇಮ್ಸ್ನ ಪುರುಷರ ಮ್ಯಾರಥಾನ್ ಫೈನಲ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಈ ಮೂಲಕ ಏಷ್ಯನ್ ಕ್ರೀಡಾಕೂಟದಲ್ಲಿ 44 ವರ್ಷಗಳ ಬಳಿಕ ಭಾರತ ಮ್ಯಾರಥಾನ್ ಪದಕ ಗೆದ್ದ ಸಾಧನೆ ಮಾಡಿದೆ.ಬರ್ವಾಲ್ ಅವರು
2 ಗಂಟೆ 11 ನಿಮಿಷ 37 ಸೆಕೆಂಡುಗಳಲ್ಲಿ ಗುರಿ ತಲುಪಿದ್ದರೆ, 2 ಗಂಟೆ 10 ನಿಮಿಷ 49 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಜಪಾನ್ನ ಇಚಿತಕ ಯಮಶಿತಾ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.
1982ರಲ್ಲಿ ದೆಹಲಿಯಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಮ್ಯಾರಥಾನ್ ಪದಕ ಗೆದ್ದಿತ್ತು. ಪ್ರಸ್ತಕ ಟೂರ್ನಿಯಲ್ಲಿ ಭಾರತದ ಕ್ರೀಡಾಪಟುಗಳು 2 ಚಿನ್ನ, 10 ಬೆಳ್ಳಿ, 12 ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ.
ಭಾರತದ ಮಾನುಷ್ ಶಾ ಮತ್ತು ದಿಯಾ ಚಿತಳೆ ಅವರು ಏಷ್ಯನ್ ಗೇಮ್ಸ್ ಟೇಬಲ್ ಟೆನಿಸ್ ಮಿಶ್ರ ಡಬಲ್ಸ್ ವಿಭಾಗದಲ್ಲಿ ಕಂಚಿನ ಪದಕ ಪಡೆದರು. ಸೆಮಿಫೈನಲ್ ಪಂದ್ಯದಲ್ಲಿ 0–4 ರಿಂದ ಚೀನಾದ ವಾಂಗ್ ಚುಖಿನ್– ಸುನ್ ಯಿಂಗ್ಶಾ ಜೋಡಿಗೆ ಮಣಿದರು.
ಭಾರತದ ಪುರುಷರ ಮತ್ತು ಮಹಿಳಾ ತಂಡಗಳು ಕಬಡ್ಡಿಯಲ್ಲಿ ಏಷ್ಯನ್ ಕ್ರೀಡಾಕೂಟದ ಫೈನಲ್ ಪ್ರವೇಶಿಸಿ ಮತ್ತೊಮ್ಮೆ ತಮ್ಮ ಪ್ರಾಬಲ್ಯ ಮೆರೆದವು. ಇದರೊಂದಿಗೆ ಚಿನ್ನದ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ.ಭಾರತದ ಮಹುಳಾ ತಂಡ 48–24ರಿಂದ ಜಯಭೇರಿ ಬಾರಿಸಿತು. ಪುರುಷರ ವಿಭಾಗದಲ್ಲಿ ಭಾರತ ಬಳಗವು 66–28ರಿಂದ ಥಾಯ್ಲೆಂಡ್ ವಿರುದ್ಧ ಮೇಲುಗೈ ಸಾಧಿಸಿತು.








