ಐವರ್ನಾಡು:ಐವರ್ನಾಡಿನ ಕೃಷಿಕ ಹಿತರಕ್ಷಣಾ ಸಮಿತಿ ವತಿಯಿಂದ ಕಾಡು ಪ್ರಾಣಿಗಳ ಉಪಟಳ ತಡೆಗಟ್ಟಲು ಮತ್ತು ಪರಿಹಾರ ಉಪಾಯಗಳ ಕುರಿತ ಮಾಹಿತಿ ಕಾರ್ಯಗಾರವು ಐವರ್ನಾಡು ಗ್ರಾಮ ಪಂಚಾಯತ್ ಸಮುದಾಯ ಭವನದಲ್ಲಿ ಸೆ.22ರಂದು ನಡೆಯಿತು. ಕಾರ್ಯಾಗಾರವನ್ನು ಸುಳ್ಯ ತಹಶೀಲ್ದಾರ್ ಮಂಜುಳ.ಎಂ. ಉದ್ಘಾಟಿಸಿದರು.ಸಭಾ ಕಾರ್ಯಕ್ರಮದ
ಅಧ್ಯಕ್ಷತೆಯನ್ನು ಕೃಷಿಕ ಹಿತರಕ್ಷಣಾ ಸಮಿತಿ ಸಂಚಾಲಕ ಕೃಷ್ಣ ಪ್ರಸಾದ್ ಮಡ್ತಿಲ ವಹಿಸಿದ್ದರು. ಪುತ್ತೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ್ , ಪುತ್ತೂರು ವಯಲ ಅರಣ್ಯಾಧಿಕಾರಿ ಕಿರಣ್.ಬಿ. ಎಂ.ಐವರ್ನಾಡು ಗ್ರಾಮ ಆಡಳಿತಾಧಿಕಾರಿ ಸುಜು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ಯಾಂ ಪ್ರಸಾದ್ ,ಸಮಿತಿ ಸಹ ಸಂಚಾಲಕರಾದ ಗಣೇಶ್ ಕೊಚ್ಚಿ ಮತ್ತು ಸಾತ್ವಿಕ್ ಕುದುಂಗು ಉಪಸ್ಥಿತರಿದ್ದರು.
ಕಿಶನ್ ಜಬಳೆ ಮತ್ತು ಅಜಿತ್ ಕಾರ್ಯಕ್ರಮ ನಿರೂಪಿಸಿದರು ಈ ಸಂಧರ್ಭದಲ್ಲಿ ಅರಣ್ಯ ಇಲಾಖೆ ಡಿ ಆರ್ ಎಫ್ ಒ ಗಳಾದ ಚಂದ್ರ ಬಿ.ಜಿ , ಸಂಜನಾ ಬಿ, ಸೌಮ್ಯ ಎ.ಜಿ ಬೀಟ್ ಅರಣ್ಯ ರಕ್ಷಕರಾದ ಸತ್ಯನ್ ಡಿ ಜಿ ಉಪಸ್ಥಿತರಿದ್ದರು.
ಬಳಿಕ ಸಂವಾದ ಕಾರ್ಯಕ್ರಮ ನಡೆಯಿತು. ಎಸಿಎಫ್ ಸುಬ್ಬಯ್ಯ ನಾಯ್ಕ್ ಹಾಗು ಆರ್ಎಫ್ಒ ಕಿರಣ್.ಬಿ.ಎಂ. ಕಾಡು ಪ್ರಾಣಿಗಳ ಉಪಟಳ ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಸಮಿತಿಯ ಸದಸ್ಯರು, ಕೃಷಿಕರು ಸಂವಾದದಲ್ಲಿ ಭಾಗವಹಿಸಿದರು.






