ಸುಳ್ಯ:ಕನ್ನಡ ರಾಜ್ಯೋತ್ಸವ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲಾಡಳಿತ ನೀಡುವ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ 119 ವ್ಯಕ್ತಿಗಳಿಗೆ ಮತ್ತು 54 ಸಂಘ ಸಂಸ್ಥೆಗಳಿಗೆ ಲಭಿಸಿದ. ಸುಳ್ಯ ತಾಲೂಕಿನಿಂದ ಹಿರಿಯ ಪತ್ರಕರ್ತ ಗಂಗಾಧರ ಮಟ್ಟಿ,ಸುಳ್ಯ ತಾಲೂಕು
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪೇರಾಲು,ಮಲೆನಾಡು ಗಿಡ್ಡ ಗೋ ತಳಿ ಸಂರಕ್ಷಣೆಯ ಕಾರ್ಯ ನಡೆಸುತ್ತಿರುವ ಮುರುಳ್ಯದ ಕೃಷಿಕ ಅಕ್ಷಯ ಆಳ್ವ, ಕ್ರೀಡಾ ಪಟು ಕೊಡಿಯಾಲದ ಸುಬ್ರಹ್ಮಣ್ಯ ಕೆ.ಎಂ,ತಾಲೂಕು ಯುವಜನ ಸಂಯುಕ್ತ ಮಂಡಳಿ ಮಾಜಿ ಅಧ್ಯಕ್ಷ ಪವನ್ ಪಲ್ಲತಡ್ಕ, ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಮಹಮ್ಮದ್ ಇಕ್ಬಾಲ್ ಬಾಳಿಲ, ರವಿಕಕ್ಕೆಪದವು ಅವರಿಗೆ ವೈಯುಕ್ತಿಕ ನೆಲೆಯಲ್ಲಿ

ಪ್ರಶಸ್ತಿ ಲಭಿಸಿದೆ. ಪಂಜದ ಶ್ರೀ ಶಾರದಾಂಬಾ ಯಕ್ಷಗಾನ ಕಲಾ ಸೇವಾ ಟ್ರಸ್ಟ್ಗೆ ಸಂಘ ಸಂಸ್ಥೆಯ ನೆಲೆಯಲ್ಲಿ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ. ನ.1ರಂದು ಮಂಗಳೂರಿನಲ್ಲಿ ನಡೆದ ಜಿಲ್ಲಾ ರಾಜ್ಯೋತ್ಸವ ಆಚರಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಸುಬ್ರಹ್ಮಣ್ಯ ಕೆ.ಎಂ.









