ಸುಳ್ಯ:ಅಭಿಮಾನಿಗಳು ನೀಡುವ ಪ್ರೀತಿ, ವಿಶ್ವಾಸದ,ಅಭಿಮಾನವೇ ಪ್ರತಿಯೊಬ್ಬ ಕಲಾವಿದನ ಬೆಳವಣಿಗೆಗೆ ಶ್ರೀರಕ್ಷೆ. ಜನರ ಪ್ರೀತಿ, ವಿಶ್ವಾಸ ಕಲಾವಿದರ ಅತೀ ಮೌಲ್ಯಯುತ ಸಂಪತ್ತು ಎಂದು ಖ್ಯಾತ ಚಲನಚಿತ್ರ ತಾರೆ, ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್ ಹೇಳಿದ್ದಾರೆ. ಅವರು
ಸುಳ್ಯದ ಪ್ರತಿಷ್ಠಿತ ಮೊಬೈಲ್ ಮಳಿಗೆ ‘ಸೆಲ್ ಹೌಸ್ ಮೊಬೈಲ್’ನ ನವೀಕೃತ ಶೋರೂಮ್ ಉದ್ಘಾಟಿಸಿ ಮಾತನಾಡಿದರು. ಕಲಾವಿದರಿಗೆ ಅದ್ಭುತ
ಪ್ರೋತ್ಸಹ ನೀಡುವವರು ಸುಳ್ಯದ ಜನತೆ ಎಂದು ಅವರು ಬಣ್ಣಿಸಿದರು. ನಗುಮೊಗದ ಉತ್ಕೃಷ್ಟ ಸೇವೆ ಸೆಲ್ ಹೌಸ್ ಮೊಬೈಲ್ ಸಂಸ್ಥೆಯ ಯಶಸ್ಸಿನ ಗುಟ್ಟು ಎಂದು ಹೇಳಿದರು. ಗ್ರಾಹಕರ ಪ್ರೋತ್ಸಾಹದಿಂದ ಬೆಳೆದ ಸೆಲ್ ಹೌಸ್ ಮೊಬೈಲ್ ಸಂಸ್ಥೆ ಇನ್ನಷ್ಟು ಯಶಸ್ಸಿನ ಶಿಖರವನ್ನು ಏರಲಿ ಎಂದು ಬೋಳಾರ್ ಹಾರೈಸಿದರು.
ಸೆಲ್ ಹೌಸ್ ಮೊಬೈಲ್ನ ಅತಿ ವಿಶಾಲವಾದ, ಸಂಪೂರ್ಣ ಹವಾ ನಿಯಂತ್ರಿತ, ಅತ್ಯಾಧುನಿಕ ಮತ್ತು ಆಕರ್ಷಕ ಶೋರೂಮ್ ಹೊಸ ಆಕರ್ಷಕ ಲುಕ್ನೊಂದಿಗೆ ಲೋಕಾರ್ಪಣೆಗೊಂಡಿತು.ವರ್ತಕರ ಸಂಘದ

ಗೌರವಾಧ್ಯಕ್ಷ ಪಿ.ಬಿ.ಸುಧಾಕರ ರೈ ಮಾತನಾಡಿ ಸುಳ್ಯದಲ್ಲಿ ಮೊಬೈಲ್ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿ ನಡೆದಿದೆ ಎಂದು ಹೇಳಿದರು.
ದ.ಕ.ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ನಿರ್ದೇಶಕರಾದ ಅಬೂಬಕ್ಕರ್ ಅಡ್ಕಾರ್, ವರ್ತಕರ ಸಂಘದ ಅಧ್ಯಕ್ಷ ಅಬ್ದುಲ್ ಹಮೀದ್ ಜನತಾ, ಪ್ರಮುಖರಾದ ಮಹಮ್ಮದ್ ಇಕ್ಬಾಲ್ ಎಲಿಮಲೆ, ಮಹಮ್ಮದ್ ಕುಂಞಿ ಗೂನಡ್ಕ, ಕೆ.ಬಿ.ಇಬ್ರಾಹಿಂ ಗಾಂಧಿನಗರ, ಪಿ.ಎ.ಮಹಮ್ಮದ್, ಇಬ್ರಾಹಿಂ ಹಾಜಿ ಮಂಡೆಕೋಲು, ಮಹಮ್ಮದ್ ಫವಾಝ್ ಕನಕಮಜಲು, ಸುಳ್ಯ ತಾಲೂಕು ಮೊಬೈಲ್ ಅಸೋಸಿಯೇಷನ್ ಅಧ್ಯಕ್ಷ ಅಬ್ದುಲ್ ರಹಿಮಾನ್, ಚಂದ್ರಶೇಖರ ನಂಜೆ, ಶಶಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಸೆಲ್ ಹೌಸ್ ಮೊಬೈಲ್ ಶೋರೂಮ್ನ ಮಾಲಕರಾದ ಹ್ಯಾರೀಸ್ ಮಂಡೆಕೋಲು ಸ್ವಾಗತಿಸಿ, ಅತಿಥಿಗಳನ್ನು ಗೌರವಿಸಿದರು.ಕಳೆದ

ಒಂದೂವರೆ ದಶಕಗಳಿಂದ ಸುಳ್ಯದ ಮುಖ್ಯ ರಸ್ತೆಯಲ್ಲಿ ಹೋಟೆಲ್ ದ್ವಾರಕಾ ಮುಂಭಾಗದ ಬಾಳೆಮಕ್ಕಿ ಹಾನೆಸ್ಟ್ ಬಿಲ್ಡಿಂಗ್ನಲ್ಲಿ ಕಾರ್ಯಾಚರಿಸುತ್ತಿರುವ ಸೆಲ್ ಹೌಸ್ ಮೊಬೈಲ್ ಶೋರೂಮ್ ಅದೇ ಇದೀಗ ನವೀಕರಣಗೊಂಡು ಅದೇ ಸ್ಥಳದಲ್ಲಿ ಹೊಸ ಲುಕ್ನೊಂದಿಗೆ ಉದ್ಘಾಟನೆಯಾಗಿದೆ. ಸೆಲ್ ಹೌಸ್ ನವೀಕೃತ ಶೋರೂಮ್ ಉದ್ಘಾಟನೆ ಮತ್ತು ದೀಪಾವಳಿ ಪ್ರಯುಕ್ತ ಫೆಸ್ಟಿವಲ್ ಬಿಗ್ ಸೇಲ್ ಆರಂಭಗೊಂಡಿದೆ. ಇದರ ಅನ್ವಯ ಆಕರ್ಷಕ ಉಚಿತ ಉಡುಗೊರೆಗಳನ್ನು ನೀಡುತಿದೆ. ಸ್ಮಾರ್ಟ್ ಫೋನ್, ಎಸ್ಸಸರೀಸ್ ಸೇರಿ ಪ್ರತಿ ಖರೀದಿಗೆ ಉಚಿತ ಕೂಪನ್ ನೀಡಲಾಗುತಿದೆ. ಪ್ರತಿ ವಾರ ಕೂಪನ್ ಡ್ರಾ ನಡೆಸಿ

ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತಿದೆ.
ಆಫಲ್, ಸ್ಯಾಮ್ಸಂಗ್, ಒಪ್ಪೊ, ವಿವೊ, ವನ್ ಪ್ಲಸ್, ನೋಕಿಯಾ, ರಿಯಲ್ ಮಿ, ಎಂಐ ಹೀಗೆ ಎಲ್ಲಾ ಕಂಪೆನಿಗಳ ಬ್ರಾಂಡೆಡ್ ಮೊಬೈಲ್ಗಳ
ಸೇಲ್ಸ್ ಮತ್ತು ಸರ್ವೀಸ್ ನಡೆಸಿ ಜನಪ್ರಿಯವಾಗಿರುವ ಸೆಲ್ ಹೌಸ್ ಮೊಬೈಲ್ಸ್ನಲ್ಲಿ ಎಲ್ಲಾ ಕಂಪೆನಿಗಳ ಲೇಟೆಸ್ಟ್ ಎಡಿಷನ್ ಸ್ಮಾರ್ಟ್ ಫೋನ್ಗಳು ಮತ್ತು ಎಸ್ಸೆಸರೀಸ್ಗಳು ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿದೆ. ಎಲ್ಲಾ ಮೊಬೈಲ್ಗಳ

ತ್ವರಿತ ಸರ್ವೀಸ್ ಮತ್ತು ದುರಸ್ತಿ ಅತೀ ಕಡಿಮೆ ದರದಲ್ಲಿ ಮಾಡಿ ಕೊಡಲಾಗುತ್ತದೆ.
ಸ್ಮಾರ್ಟ್ ಫೋನ್ ಖರೀದಿಗೆ ಶೂನ್ಯ ಬಡ್ಡಿ ದರದಲ್ಲಿ ಅತೀ ಕಡಿಮೆ ದಾಖಲೆ ಮತ್ತು ಸರಳ ರೀತಿಯಲ್ಲಿ ಸಾಲ ಮೇಳವೂ ಲಭ್ಯವಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
9686348289
9449748289























