ಸಂಪಾಜೆ:ರಸ್ತೆ ಅಪಘಾತ ಸುರಕ್ಷತಾ ಸಪ್ತಾಹ ಹಾಗೂ ಮಾದಕ ದ್ರವ್ಯ ವಿರೋಧಿ ಅಭಿಯಾನದ ಅಂಗವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸಂಪಾಜೆಯಲ್ಲಿ ವಾಹನ ಜಾಥಾ ಕಾರ್ಯಕ್ರಮ ನಡೆಯಿತು.ಸಂಪಾಜೆ ಗ್ರಾಮ ಪಂಚಾಯತ್, ಸುಳ್ಯ ತಾಲೂಕು ಇದರ ಆಶ್ರಯದಲ್ಲಿ
ಆಂಬುಲೆನ್ಸ್ ಚಾಲಕರ ಮತ್ತು ಮಾಲಕರ ಸಂಘ ಸುಳ್ಯ ತಾಲೂಕು, ಚಟ್ಟೆಕಲ್ಲು ಫ್ರೆಂಡ್ಸ್ ಕ್ಲಬ್ ಕಲ್ಲುಗುಂಡಿ ಹಾಗೂ ಲಯನ್ಸ್ ಕ್ಲಬ್ ಸಂಪಾಜೆ ಇವುಗಳ ಸಹಕಾರದೊಂದಿಗೆ ಕಲ್ಲುಗುಂಡಿ ಹೊರಠಾಣೆ ಸಮೀಪದ ಕೂಲಿಶೆಡ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಎಂ.ಆರ್ ಸಂಪಾಜೆ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಪ್ರಮೋದ್ ಅವರಿಗೆ ಪ್ಲೇ ಕಾರ್ಡ್ ನೀಡುದರ ಮೂಲಕ ಜಾಥಾಕ್ಕೆ ಚಾಲನೆ ನೀಡಲಾಯಿತು.ಕಲ್ಲುಗುಂಡಿ ಹೊರಠಾಣೆಯ
ಎಎಸ್ಐ ಶೀನಪ್ಪ ಗೌಡ ಕೆ., ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಮಹಮ್ಮದ್ ಕುಂಞಿ ಗೂನಡ್ಕ, ಜಗದೀಶ್ ರೈ, ಸುಮತಿ ಶಕ್ತಿವೇಲು, ಮಾಜಿ ಉಪಾಧ್ಯಕ್ಷರಾದ ಎಸ್.ಕೆ. ಹನೀಫ್, ಲಿಸ್ಸಿ ಮೊನಾಲಿಸಾ, ಮಾಜಿ ಸದಸ್ಯರಾದ ಎ.ಕೆ. ಹನೀಫ್, ತಾಜ್ ಮೊಹಮ್ಮದ್, ವಿಮಲಾ ಪ್ರಸಾದ್, ನಾಗೇಶ್ ಪಿ.ಆರ್., ಜಿ. ರಾಮಚಂದ್ರ, ಆಶಾ ವಿನಯ್ ಕುಮಾರ್, ಲೂಕಾಸ್ ಟಿ ಐ,ಸಂಪಾಜೆ ಪಿ.ಯು. ಕಾಲೇಜಿನ ಪ್ರಾಂಶುಪಾಲ ಲೋಕನಾಯ್ಕ್,ಗೂನಡ್ಕ ಶಾರದಾ ಶಾಲೆಯ ಮುಖ್ಯೋಪಾಧ್ಯಾಯ ಹನುಮಂತಪ್ಪ,ಆಂಬುಲೆನ್ಸ್ ಚಾಲಕರ ಮತ್ತು ಮಾಲಕರ ಸಂಘದ ಅಧ್ಯಕ್ಷ ರಫೀಕ್ ಬಿ.ಎಂ, ಸಿ.ಎಫ್.ಸಿ. ಕಲ್ಲುಗುಂಡಿಯ ಅಧ್ಯಕ್ಷ ಉಮ್ಮರ್ ಗುಲ್ಮಕಜೆ ಲಯನ್ಸ್ ಕ್ಲಬ್ ಅಧ್ಯಕ್ಷ ಗಿರೀಶ್, ರಹೀಮ್ ಬೀಜದಕಟ್ಟೆ,ಉನೈಸ್ ಪಿ.ಯು.,ಸಾಜೀದ್ ಅಝ್ಹರಿ, ಗಣಪತಿ ಭಟ್, ಜಗದೀಶ್ ನಾಯ್ಕ್, ಯು.ಬಿ. ಚಕ್ರಪಾಣಿ, ಪದ್ಮಯ್ಯ ಗೌಡ ಬೊಳುಗಲ್ಲು,ರಜಾಕ್ ಸೂಪರ್, ಕಲ್ಲುಗುಂಡಿ, ಎಸ್. ಅಲಿ ಹಾಜಿ, ಅಬ್ಬಾಸ್ ಹಾಜಿ ಸಂಟ್ಯಾರ್, ಯೂಸುಫ್ ಕಲ್ಲುಗುಂಡಿ, ತಾಜುದ್ದೀನ್ ಟರ್ಲಿ, ಸಿಲ್ವಸ್ಟರ್ ಡಿಸೋಜ, ಕೆ ಎಫ್ ಡಿ ಸಿ ಯ ಅಪ್ಪಣ್ಣ, ಅರಣ್ಯ ಇಲಾಖೆಯ ವೆಂಕಟೇಶ್ ಮತ್ತು ಮನೋಜ್, ಸಿದ್ದಿಕ್ ಗೂನಡ್ಕ, ಹನೀಫ್, ಶಿವ, ಶರತ್ ಕೀಲಾರು, ರಕ್ಷಿತ್ ದೊಡ್ಡಡ್ಕ, ಪ್ರಸಾದ್ ವಿ.ಆರ್.,ಹನೀಫ್ ಎಸ್ ಎ, ಜಾಫರ್ ಸಾದಿಕ್ ಕುಂಭಕ್ಕೋಡ್, ಮೋಹನ್, ಮೋಹನಾಂಗಿ, ಹರಿಣಿ, ಶಾಲಿನಿ, ಪಂಚಾಯತ್ ಸಿಬ್ಬಂದಿ ವರ್ಗ ಮತ್ತಿತರರು ಉಪಸ್ಥಿತರಿದ್ದರು.
ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿ.ಕೆ. ಹಮೀದ್ ಗೂನಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ಹಸೈನ್ ಸಿ.ಎ., ರುಶೈದ್ ಕೆ.ಆರ್. ಹಾಗೂ ಫಾರೂಕ್ ಕಾನಕ್ಕೋಡ್ ಸಹಕರಿಸಿದರು.









