ಸುಳ್ಯ:ಕನ್ನಡ ಸಾಹಿತ್ಯ ಪರಿಷತ್ತಿನ ಸುಳ್ಯ ತಾಲೂಕು ಘಟಕದ ಆಶ್ರಯದಲ್ಲಿ ಸುಳ್ಯ, ಪಂಜ ಹೋಬಳಿ ಘಟಕ, ಶಾಲಾ ಕಾಲೇಜು ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಡೆಯುವ ಸಾಹಿತ್ಯ ಸಂಭ್ರಮದ ಅಂಗವಾಗಿ ದೀಪಾವಳಿ ಕವಿಗೋಷ್ಠಿ, ಹರಟೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಗೂನಡ್ಕದ
ಶ್ರೀ ವಿಷ್ಣು ದೋಳ ಇಲ್ಲಿ ನಡೆಯಿತು. ಷರಾ ಫೌಂಡೇಶನ್ ಸುಳ್ಯ, ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ, ಸುಳ್ಯ ಪ್ರೆಸ್ ಕ್ಲಬ್ ಸಹಕಾರದೊಂದಿಗೆ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಅಧ್ಯಕ್ಷ ಚಂದ್ರಶೇಖರ ಪೇರಾಲು ವಹಿಸಿದ್ದರು. ನಿವೃತ್ತ ಶಿಕ್ಷಕ ಯು.ಎಸ್. ಚಿದಾನಂದ ದೀಪಾವಳಿ ಹರಟೆ ಕಾರ್ಯಕ್ರಮ ನಡೆಸಿಕೊಟ್ಟರು.
ಮುಖ್ಯ ಅತಿಥಿಗಳಾಗಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ ಪೈ, ಸುಳ್ಯ ತಹಶೀಲ್ದಾರ್ ಮಂಜುಳ.ಎಂ, ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಉಮ್ಮರ್ ಬೀಜದಕಟ್ಟೆ, ಉದ್ಯಮಿ ಸತೀಶ್ ಡಿ.ವಿ., ಪತ್ರಕರ್ತ ಹರೀಶ್ ಬಂಟ್ವಾಳ್, ಡಾ.ಲೀಲಾಧರ ಡಿ.ವಿ. ಭಾಗವಹಿಸಿದ್ದರು.ವೀರಪ್ಪ ಗೌಡ ದೋಳ, ಗೌರಮ್ಮ ಡಿ.ವಿ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಚಂದ್ರಶೇಖರ ಪೇರಾಲು, ಗಂಗಾಧರ ಮಟ್ಟಿ ಅವರನ್ನು ಗೌರವಿಸಲಾಯಿತು. ಕಸಾಪ ಗೌರವ ಕಾರ್ಯದರ್ಶಿಗಳಾದ ಚಂದ್ರಮತಿ ಕೆ, ತೇಜಸ್ವಿ ಕಡಪಳ ಉಪಸ್ಥಿತರಿದ್ದರು.ಪ್ರೆಸ್ ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ ಸ್ವಾಗತಿಸಿದರು, ರಮೇಶ್ ನೀರಬಿದಿರೆ ಕಾರ್ಯಕ್ರಮ ನಿರೂಪಿಸಿದರು.
ದೀಪಾವಳಿ ಕವಿಗೋಷ್ಠಿ: ಇದಕ್ಕೂ ಮುನ್ನ ದೀಪಾವಳಿ ಕವಿಗೋಷ್ಠಿ ನಡೆಯಿತು. ಸ್ಮಿತಾ ಅಮೃತರಾಜ್ ಅಧ್ಯಕ್ಷತೆ ವಹಿಸಿದ್ದರು. ಸಂಗೀತಾ ರವಿರಾಜ್ ಹೊಸೂರು, ಸಹನಾ ಕಾಂತಬೈಲು, ಚಂದ್ರಾವತಿ ಬಡ್ಡಡ್ಕ ಸಹನಾ ಗಿರೀಶ್, ವಿನೋದ್ ಮೂಡಗದ್ದೆ, ಮಮತಾ ಪಡ್ಡಂಬೈಲು, ಲತಾಶ್ರೀಸುಪ್ರೀತ್ ಮೋಂಟಡ್ಡ, ದೀಪಶ್ರೀ ಅಡ್ತಲೆ ಕವನ ವಾಚಿಸಿದರು.
ಬಳಿಕ ರಂಗ ಮಯೂರಿ ಕಲಾ ಶಾಲೆಯ ವಿದ್ಯಾರ್ಥಿಗಳಿಂದ ಕನ್ನಡ ಗೀತ ಗಾಯನ, ನೃತ್ಯ ಪ್ರದರ್ಶನ ನಡೆಯಿತು.






























