ಟೋಕಿಯೋ: ಜಪಾನ್ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಮಹಿಳಾ ವಿಭಾಗದ ಕ್ರಿಕೆಟ್ನಲ್ಲಿ ಭಾರತದ ಮಹಿಳಾ ತಂಡ ಚಿನ್ನ ಗೆದ್ದುಕೊಂಡಿದೆ.ಇಂದು ನಡೆದ ಭಾರತ ಮತ್ತು ಶ್ರೀಲಂಕಾ ಮಹಿಳೆಯರ ಟಿ20 ಕ್ರಿಕೆಟ್ ಅಂತಿಮ ಹಣಾಹಣಿಯಲ್ಲಿ ಟೀಮ್ ಇಂಡಿಯಾ ಶ್ರೀಲಂಕಾ ತಂಡವನ್ನು
147 ರನ್ ಗಳ ಅಂತರದಲ್ಲಿ ಸೋಲಿಸಿ ಚಿನ್ನಕ್ಕೆ ಮುತ್ತಿಟ್ಟರು.ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಟೀಮ್ ಇಂಡಿಯಾ ಆರಂಭಿಕ ಬ್ಯಾಟ್ಸ್ವುಮನ್ಗಳಾದ ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಅವರಿಂದ ಸ್ಫೋಟಕ ಓಪನಿಂಗ್ ಸಿಕ್ಕಿತು. ಲಂಕಾ ಬೌಲರ್ಗಳನ್ನು ಬೆಂಡೆತ್ತಿದ ಮಂಧಾನ (79 ರನ್, 45 ಎಸೆತ) ಆಕರ್ಷಕ ಅರ್ಧಶತಕ ಬಾರಿಸಿದರು. ಇನ್ನು ಶಫಾಲಿ (48 ರನ್, 29 ಎಸೆತ) ಅರ್ಧಶತಕದಿಂದ ವಂಚಿತರಾದರು. ಇವರ ಬೆನ್ನಲ್ಲೇ
ಬಂದ ನಾಯಕಿ ಹರ್ಮನ್ಪ್ರೀತ್ ಕೌರ್ (19 ರನ್, 17 ಎಸೆತ) ರಿಚಾ ಘೋಷ್ (ಅಜೇಯ 49 ರನ್, 22 ಎಸೆತ) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ತಂಡ 20 ಓವರ್ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡ ಟೀಮ್ ಇಂಡಿಯಾ 216 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ 15.4 ಓವರ್ಗಳಲ್ಲಿ 69 ರನ್ಗೆ ಆಲ್ ಔಟ್ ಆಯಿತು. ಭಾರತದ ಪರ ದೀಪ್ತಿ ಶರ್ಮ 3 ವಿಕೆಟ್, ಶಫಾಲಿ ವರ್ಮ, ಶ್ರೇಯಾಂಕ ಪಾಟೀಲ್, ಶ್ರೀ ಚರಣಿ ತಲಾ 2 ವಿಕೆಟ್ ಪಡೆದರು.






